HomeIndiaಮನೆ ಮುಂದೆ ಆಟವಾಡುತ್ತಿದ್ದ ಮಗುವನ್ನೆ ಎಳೆದೊಯ್ದ ಚಿರತೆ

ಮನೆ ಮುಂದೆ ಆಟವಾಡುತ್ತಿದ್ದ ಮಗುವನ್ನೆ ಎಳೆದೊಯ್ದ ಚಿರತೆ

ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ನರಭಕ್ಷಕ ಚಿರತೆಯೊಂದು ಎಳೆದೊಯ್ದಿರುವ ಹೃದಯವಿದ್ರಾವಕ ಘಟನೆ ಉತ್ತರಾಖಂಡ್ ನ ಪುರ್ವಾಲ್ ಗ್ರಾಮದಲ್ಲಿ ನಡೆದಿದೆ.

ಮೂರು ವರ್ಷದ ಮಗು ಜೊತೆ ಕೆಲ ಮಕ್ಕಳು ಕೂಡ ಆಟವಾದುತ್ತಿದ್ದರು. ಏಕಾಏಕಿ ದಾಳಿ ನಡೆಸಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿ ಎಳೆದೊಯ್ದು ತಿಂದು ಹಾಕಿದೆ.

ಮನೆಯ ಸಮೀಪದ ಪೊದೆಯೊಂದರಲ್ಲಿ ಮಗುವಿನ ಅರ್ಧ ದೇಹ ಪತ್ತೆಯಾಗಿದೆ. ಮೃತ ಮಗುವನ್ನು ಅಂಕಿತ್ ಕುಮಾರ್ ಮಗ ರಾಜ್ ಕುಮಾರ್ ಎಂದು ಗುರುತಿಸಲಾಗಿದೆ. ಮಗು ತನ್ನ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆ ಮುಂದೆ ಆಟವಾಡುತ್ತಿತ್ತು. ಈ ವೇಳೆ ಹೊಂಚು ಹಾಕಿ ನರಭಕ್ಷಕ ಚಿರತೆ ಮಗುವನ್ನು ಎಳೆದೊಯ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗು ಕಾಣದಿದ್ದಾಗ ಮಗುವಿನ ತಾಯಿ ಹುಡುಕಾಟ ನಡೆಸಿದ್ದಾರೆ. ಅಕ್ಕಪಕ್ಕದವರೂ ಮಗುವನ್ನು ಹುಡುಕಿದ್ದಾರೆ. ಆದರೂ ಮಗು ಸುಳಿವಿಲ್ಲ. ಮನೆಯ ಹಿಂದಿನ ರಸ್ತೆಯಲ್ಲಿ ರಕ್ತದ ಕಲೆಗಳು ಬಿದ್ದಿದ್ದವು. ಇದನ್ನು ಗಮನಿಸಿದ ಕೆಲವರು ಹಿಂಬಾಲಿಸಿ ಹೋದಾಗ ಪೊದೆಯಲ್ಲಿ ವಿರೂಪಗೊಂಡಿರುವ ಮಗುವಿನ ಮೃತದೇಹ ಪತ್ತೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular