=
ಪ್ರಕಾಶ್ ಕುಮಾರ್ ಎಂಬುವವರ ಪುತ್ರಿಗೆ ಸೀಟ್ ಕೊಡಿಸಲು ನರಸಿಂಹಮೂರ್ತಿ 45 ಲಕ್ಷ ರೂ. ಹಣವನ್ನು ಪಡೆದಿದ್ದರು. ಮೆಡಿಕಲ್ ಸೀಟ್ ಸಿಗದ ಕಾರಣ 45 ಲಕ್ಷ ರೂ.ಗೆ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕಾಶ್ ಕುಮಾರ್ ಯರಪ್ಪ ಅವರು ಜೆ.ನರಸಿಂಹಸ್ವಾಮಿ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.
ಇಂದು ವಿಚಾರಣೆ ನಡೆಸಿದ ಕೋರ್ಟ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6 ಶಿಕ್ಷೆ ವಿಧಿಸಿ ಆದೇಶಿಸಿದೆ. ಜೆ.ನರಸಿಂಹಸ್ವಾಮಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ 2 ತಿಂಗಳಲ್ಲಿ 45 ಲಕ್ಷ ಹಣವನ್ನು ಹಿಂದಿರುಗಿಸುವಂತೆ ಕೋರ್ಟ್ ಸೂಚನೆ ನೀಡಿದೆ.

