HomeKarnatakaBIG NEWS: ಮತದಾರರ ಆಕರ್ಷಣೆಯ ಕೇಂದ್ರವಾದ 'ಗೊಂಬೆ ಮತಗಟ್ಟೆ’: ಚನ್ನಪಟ್ಟಣದಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ಮತ...

BIG NEWS: ಮತದಾರರ ಆಕರ್ಷಣೆಯ ಕೇಂದ್ರವಾದ ‘ಗೊಂಬೆ ಮತಗಟ್ಟೆ’: ಚನ್ನಪಟ್ಟಣದಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ಮತ ಕೇಂದ್ರ

ರಾಮನಗರ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಉಪಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ವಿವಿಧ ರೀತಿಯ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾರರನ್ನು ಆಕರ್ಷಿಸುತ್ತಿದೆ.

ಅದರಲ್ಲಿಯೂ ಗೊಂಬೆಗಳ ನಾಡು ಚೆನ್ನಪಟ್ಟಣದಲ್ಲಿ ವಿವಿಧ ರೀತಿಯ ಸಾಂಪ್ರದಾಯಿಕ ಮತಗಟ್ಟೆಗಳು ಕಣ್ಮನಸೆಳೆಯುತ್ತಿವೆ. ವಿಶೇಷವಾಗಿ ‘ಗೊಂಬೆ ಮತಗಟ್ಟೆ’ ಮತದಾರರನ್ನು ತನ್ನತ್ತ ಆಕರ್ಷಿಸುತ್ತಿದೆ.

ಚೆನ್ನಪಟ್ಟಣ ಗೊಂಬೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ. ಇಲ್ಲಿನ ಗೊಂಬೆಗಳಿಗೆ ಭಾರಿ ಬೆಡಿಕೆ. ಹೀಗಾಗಿ ಚುನಾವಣಾ ಆಯೋಗ ವಿಶೇಷವಾಗಿ ಗೊಂಬೆ ಮತಗಟ್ಟೆ ನಿರ್ಮಿಸಿದೆ. ಚನ್ನಪಟ್ಟಣದ ಕೋಟೆ ಬಡವಾಣೆಯಲ್ಲಿ ವಿಶೇಷ ಸಾಂಪ್ರದಾಯಿಕ ಗೊಂಬೆ ಮತಗಟ್ಟೆ ನಿರ್ಮಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತಗಟ್ಟೆಯ ಹೊರಭಾಗದಲ್ಲಿ ಆಕರ್ಷಕ ಬಲೂನ್ ಕಮಾನು, ಗೊಂಬೆಗಳ ಫ್ಲೆಕ್ಸ್, ಅಳವದಿಸಲಾಗಿದೆ. ಮತಗಟ್ಟೆಯೊಳಗೆ ಗೊಂಬೆಗಳನ್ನು ಇಡಲಾಗಿದೆ. ಚನ್ನಪಟ್ಟಣದ ಸಾಂಪ್ರಾದಾಯಿಕ ಗೊಂಬೆಗಳ ಪ್ರದರ್ಶನ ಮಾಡಲಾಗಿದೆ. ಮರದಿಂದ ತಾಅರಿಸಿದ ರೈತರ ಜೀವನಾಡಿ ಎತ್ತಿನ ಗಾಡಿ, ರಾಜ-ರಾಣಿ, ಮಕ್ಕಳ ಆಟಿಕೆ, ಮೈಸೂರು ದಸರಾ ಜಂಬೂಸವಾರಿ, ಅರಮನೆ, ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಗೊಂಬೆಗಳನ್ನು ಕೂರಿಸಲಾಗಿದೆ. ಗೊಂಬೆ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಕರೆಯುತ್ತಿದ್ದು, ಮತದಾರರು ಅತ್ಯುತ್ಸಾಹದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular