HomeKarnatakaBIG NEWS: ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಉಲ್ಟಾ ಹೊಡೆದ ಮೃತ ಆದಿಲ್...

BIG NEWS: ಚನ್ನಗಿರಿ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಉಲ್ಟಾ ಹೊಡೆದ ಮೃತ ಆದಿಲ್ ತಂದೆ

ದಾವಣಗೆರೆ: ಚನ್ನಗಿರಿ ಠಾಣೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆದಿಲ್ ತಂದೆ ಉಲ್ಟಾ ಹೊಡೆದಿದ್ದಾರೆ. ಬೆಳಿಗ್ಗೆ ಲೋ ಬಿಪಿಯಿಂದ ತನ್ನ ಮಗ ಸಾವನ್ನಪ್ಪಿದ್ದಾನೆ ಎಂದವರು ಈಗ ಸಂಜೆಯಾಗುತ್ತಿದ್ದಂತೆ ಹೊಸ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಆದಿಲ್ ತಂದೆ ಖಲೀಮುಲ್ಲಾ, ಬೆಳಿಗ್ಗೆ ಲೋ ಬಿಪಿಯಿಂದ ಮಗ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ಇದೀಗ ಲಾಕಪ್ ಡೆತ್ ಆಗಿದೆ ಎನ್ನುತ್ತಿದ್ದಾರೆ. ಬೆಳಿಗ್ಗೆ ನಾನು ಗಾಬರಿಯಲ್ಲಿ ಏನೇನೋ ಹೇಳಿದ್ದೇನೆ. ನನ್ನ ಸೊಸೆ ನೋವಿಂದ ಏನೇನೋ ಹೇಳಿಕೆ ಕೊಟ್ಟಿದ್ದಳು ಎಂದಿದ್ದಾರೆ.

ಕಾರ್ಪೆಂಟರ್ ಕೆಲಸ ಮಾಡಿಕೊಂಡು 2 ಸಾವಿರ ಹಣ ತರುತ್ತಿದ್ದ ನನ್ನ ಮಗನನ್ನು ಪೊಲೀಸರು ಕರೆದುಕೊಂಡು ಹೋಗಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular