HomeIndiaಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮ ಬದಲು: ಹೊಸ ನಿಯಮ ತಿಳಿಯಿರಿ

ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮ ಬದಲು: ಹೊಸ ನಿಯಮ ತಿಳಿಯಿರಿ

ಭಾರತೀಯ ರೈಲ್ವೆಯ ದೇಶದ ಜನರ ಜೀವನಾಡಿ. ಪ್ರತಿನಿತ್ಯ ಕೋಟ್ಯಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಜನವರಿಯಲ್ಲಿ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಘೋಷಣೆ ಮಾಡಿ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಲಾಗಿದೆ.

ರೈಲ್ವೆ ಮಂಡಳಿಯು ಇತ್ತೀಚೆಗೆ ಹೊರಡಿಸಿದ ಅಧಿಸೂಚನೆ ಪ್ರಕಾರ ಈ ಹೊಸ ರೈಲುಗಳ ದರ ರಚನೆ ಮತ್ತು ಬುಕ್ಕಿಂಗ್ ನಿಯಮಗಳು ಹಿಂದಿನ ಅಮೃತ್ ಭಾರತ್ ರೈಲುಗಳಿಗಿಂತ ಸ್ವಲ್ಪ ಭಿನ್ನವಾಗಿರಲಿವೆ.

ಪ್ರಮುಖ ಬದಲಾವಣೆಗಳು: ಈ ಹೊಸ ನಿಯಮಗಳ ಅಡಿಯಲ್ಲಿ ಮೂಲ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಕನಿಷ್ಠ ದೂರದ ನಿಯಮಗಳನ್ನು ನವೀಕರಿಸಲಾಗಿದೆ. ಆದ್ದರಿಂದ ದರದಲ್ಲಿ ವ್ಯತ್ಯಾಸವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಕರು ಕನಿಷ್ಠ 200 ಕಿ.ಮೀ. ದೂರದ ದರವನ್ನು ಪಾವತಿಸಬೇಕಾಗುತ್ತದೆ. ಅಂದರೆ ಇದರ ಕನಿಷ್ಠ ದರ 149 ರೂ. ಆಗಿರುತ್ತದೆ. ಸೆಕೆಂಡ್ ಕ್ಲಾಸ್‌ನಲ್ಲಿ  ಕನಿಷ್ಠ ದೂರವನ್ನು 50 ಕಿ.ಮೀ. ಗೆ ನಿಗದಿಪಡಿಸಲಾಗಿದೆ, ಅಂದರೆ ಕನಿಷ್ಠ ದರ 36 ರೂ. ಇರಲಿದೆ.

ಸೀಟು ಕಾಯ್ದಿರಿಸುವಿಕೆ ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕಗಳು ಪ್ರತ್ಯೇಕವಾಗಿ ಅನ್ವಯಿಸುತ್ತವೆ. ಪ್ರಯಾಣಿಕರು ಕೇವಲ 100 ಕಿ.ಮೀ. ಪ್ರಯಾಣಿಸಿದರೂ ಸಹ, ಸ್ಲೀಪರ್ ಕ್ಲಾಸ್‌ನಲ್ಲಿ ಕನಿಷ್ಠ 200 ಕಿ.ಮೀ. ದರವನ್ನೇ ಪಾವತಿಸಬೇಕಾಗುತ್ತದೆ.

ಆರ್‌ಎಸಿ ವ್ಯವಸ್ಥೆ ರದ್ದು: ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕ್ಲಾಸ್ ವಿಭಾಗದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹೊಸ ನಿಯಮದಂತೆ, ಈ ರೈಲಿನಲ್ಲಿ ಇನ್ಮುಂದೆ ಆರ್‌ಎಸಿ ಟಿಕೆಟ್‌ಗಳು ಲಭ್ಯವಿರುವುದಿಲ್ಲ.

ಮುಂಗಡ ಕಾಯ್ದಿರಿಸುವಿಕೆ ಅವಧಿ ಪ್ರಾರಂಭವಾದಾಗಿನಿಂದಲೇ ಎಲ್ಲಾ ಬರ್ತ್‌ಗಳು ಪ್ರಯಾಣಿಕರಿಗೆ ಲಭ್ಯವಿರುತ್ತವೆ. ಅನ್ ರಿಸರ್ವ್ಡ್ (ಕಾಯ್ದಿರಿಸದ) ಸೆಕೆಂಡ್ ಕ್ಲಾಸ್ ವಿಭಾಗಕ್ಕೆ ಹಳೆಯ ನಿಯಮಗಳೇ ಮುಂದುವರಿಯಲಿವೆ.

ಅಲ್ಲದೇ ಟಿಕೆಟ್ ರದ್ದುಗೊಳಿಸಿದ 24 ಗಂಟೆಗಳ ಒಳಗೆ ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಶೀಘ್ರದಲ್ಲೇ ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು. ಕಾಯ್ದಿರಿಸಿದ ಟಿಕೆಟ್‌ಗಳಿಗೆ ಕೇವಲ ಡಿಜಿಟಲ್ ವಿಧಾನಗಳ ಮೂಲಕ ಮಾತ್ರ ಪಾವತಿಯನ್ನು ಸ್ವೀಕರಿಸಲಾಗುತ್ತದೆ.

ಕೌಂಟರ್ ಟಿಕೆಟ್‌ಗಳನ್ನು ಖರೀದಿಸುವಾಗಲೂ ಡಿಜಿಟಲ್ ಪಾವತಿಗಳಿಗೇ ಆದ್ಯತೆ ನೀಡಲಾಗುವುದು. ಒಂದು ವೇಳೆ ಡಿಜಿಟಲ್ ಪಾವತಿ ಸಾಧ್ಯವಾಗದಿದ್ದಲ್ಲಿ, ಸಾಮಾನ್ಯ ನಿಯಮಗಳ ಅಡಿಯಲ್ಲಿ ಮರುಪಾವತಿಯನ್ನು ನೀಡಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular