HomeRecipiesತೂಕ ಇಳಿಸುವವರಿಗಾಗಿ ಪರ್ಫೆಕ್ಟ್ ರೈಸ್ ರೆಸಿಪಿ: ಪೌಷ್ಟಿಕಾಂಶದ ಗಣಿ ಈ ಚನಾ ಪಾಲಕ್ ರೈಸ್

ತೂಕ ಇಳಿಸುವವರಿಗಾಗಿ ಪರ್ಫೆಕ್ಟ್ ರೈಸ್ ರೆಸಿಪಿ: ಪೌಷ್ಟಿಕಾಂಶದ ಗಣಿ ಈ ಚನಾ ಪಾಲಕ್ ರೈಸ್

ಮಕ್ಕಳ ಟಿಫನ್ ಬಾಕ್ಸ್ ಇರಲಿ ಅಥವಾ ಮಧ್ಯಾಹ್ನದ ಲಂಚ್ ಇರಲಿ, ಏನಾದರೂ ಪೌಷ್ಟಿಕಾಂಶಯುಕ್ತ ಹಾಗೂ ಬೇಗನೆ ಮಾಡಬಹುದಾದ ಅಡುಗೆಯ ಹುಡುಕಾಟದಲ್ಲಿದ್ದರೆ ‘ಚನಾ ಪಾಲಕ್ ರೈಸ್’ ಅತ್ಯುತ್ತಮ ಆಯ್ಕೆ. ಪ್ರೋಟೀನ್ ಸಮೃದ್ಧವಾಗಿರುವ ಕಡಲೆ (ಚನಾ) ಮತ್ತು ಕಬ್ಬಿಣಾಂಶವಿರುವ ಪಾಲಕ್ ಸೊಪ್ಪಿನ ಸಮ್ಮಿಶ್ರಣದಲ್ಲಿ ತಯಾರಾಗುವ ಈ ಖಾದ್ಯವು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಇದನ್ನು ಮಾಡುವುದು ಎಷ್ಟು ಸುಲಭವೋ, ಇದರ ರುಚಿಯೂ ಅಷ್ಟೇ ಅದ್ಭುತವಾಗಿರುತ್ತದೆ.

ಅಗತ್ಯವಿರುವ ಸಾಮಗ್ರಿಗಳು: ಒಂದು ಕಪ್ ನೆನೆಸಿ ಬೇಯಿಸಿದ ಕಡಲೆ (ಚನಾ), ಒಂದು ಕಪ್ ಪಾಲಕ್ ಸೊಪ್ಪಿನ ಪ್ಯೂರಿ, ಒಂದು ಕಪ್ ನೆನೆಸಿದ ಅಕ್ಕಿ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಜೀರಿಗೆ, ಕೊತ್ತಂಬರಿ ಪುಡಿ, ಗರಂ ಮಸಾಲಾ, ನಿಂಬೆ ರಸ, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲು ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಹಾಕಿ ತೆಗೆದು (ಬ್ಲಾಂಚ್), ಅದನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಜೀರಿಗೆ, ಲವಂಗ, ಏಲಕ್ಕಿ ಮತ್ತು ಬಿರಿಯಾನಿ ಎಲೆಯನ್ನು ಸೇರಿಸಿ. ಇದಕ್ಕೆ ಈರುಳ್ಳಿ ಹಾಕಿ ಅದು ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ತಯಾರಿಸಿಟ್ಟ ಪಾಲಕ್ ಪ್ಯೂರಿ ಮತ್ತು ಬೇಯಿಸಿದ ಕಡಲೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಉಪ್ಪು, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಹಾಕಿ ಹುರಿಯಿರಿ. ಈಗ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ ಮಸಾಲೆಯೊಂದಿಗೆ ಬೆರೆಸಿ. ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರು ಮತ್ತು ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಕುಕ್ಕರ್‌ನಲ್ಲಿ ಮಾಡುವುದಾದರೆ ಎರಡು ವಿಸ್ಲ್ ಕೂಗಿಸಿ ಅಥವಾ ಪಾತ್ರೆಯಲ್ಲಿ ಮಾಡುವುದಾದರೆ 15-20 ನಿಮಿಷ ಬೇಯಿಸಿ. ಬಿಸಿಬಿಸಿಯಾದ ಈ ಪುಲಾವ್‌ ಅನ್ನು ಮೊಸರು ಬಜ್ಜಿ (ರೈತ) ಅಥವಾ ಚಟ್ನಿಯೊಂದಿಗೆ ಸವಿಯಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular