ಚಾಮರಾಜನಗರ: ಚಾಮರಾಜನಗರದಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ಭೀಮನ ಬೀಡು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಸೆರೆಗಾಗಿ ಆಪರೇಷನ್ ಬೀಸ್ಟ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂಡಿಪುರ ಹುಲಿ ಮೀಸಲು ಅರಣ್ಯ ಸಿಬ್ಬಂದಿ ಆಪರೇಷನ್ ಬೀಸ್ಟ್ ಹೆಸರಲ್ಲಿ ಬೃಹತ್ ಕೂಂಬಿಂಗ್ ಆರಂಭಿಸಿದ್ದು, ಇದರಲ್ಲಿ ಡ್ರೋನ್ ಕ್ಯಾಮರಾಗಳು ಪ್ರಮುಖ ಪಾತ್ರವಹಿಸಲಿವೆ.
ಸಿಎಫ್ ಪ್ರಭಾಕರನ್ ಸೂಚನೆ ಮೇರೆಗೆ ಟೈಗರ್ ಕೂಂಬಿಂಗ್ ಗಾಗಿಯೇ ಸಿದ್ಧಪಡಿಸಲಾದ ಈಗಲ್ ಡ್ರೋನ್ ಕ್ಯಾಮರಾ ಬಳಸ್ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹುಲಿ ಚಲನವಲನಗಳನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮರಾ ನೆರವಾಗಲಿದೆ.

