HomeKarnatakaಮಂತ್ರವಾದಿ ಮಾತು ಕೇಳಿ ನಿಧಿಗಾಗಿ ಕಣ್ಣು ಕಾಣದ, ಕಿವಿ ಕೇಳದ ಹೆತ್ತ ತಾಯಿಯನ್ನೇ ಬಲಿ ಕೊಡಲು...

ಮಂತ್ರವಾದಿ ಮಾತು ಕೇಳಿ ನಿಧಿಗಾಗಿ ಕಣ್ಣು ಕಾಣದ, ಕಿವಿ ಕೇಳದ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾಗಿದ್ದ ಪುತ್ರ: ಮುಂದೆ ಆಗಿದ್ದೇನು?

ಚಾಮರಾಜನಗರ: ಮಂತ್ರವಾದಿ ಮಾತು ನಂಬಿ ಮಗನೊಬ್ಬ ಹೆತ್ತ ತಾಯಿಯನ್ನೇ ಬಲಿಕೊಡಲು ಮನೆಯೊಳಗೆ ಮಣ್ಣು ಅಗೆದು ಹುಂಡಿ ತೋಡಿದ್ದು, ಕೊನೇ ಕ್ಷಣದಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸರು ಎಂಟ್ರಿ ಕೊಟ್ಟು ದಿಷ್ಕೃತ್ಯವನ್ನು ನಿಲ್ಲಿಸಿದ್ದಾರೆ. ಮಗನಿಂದಲೇ ಬಲಿಯಾಗುತ್ತಿದ್ದ ತಾಯಿಯನ್ನು ರಕ್ಷಿಸಿದ್ದಾರೆ.

ಪಾಪಿ ಪುತ್ರನೊಬ್ಬ ಕಣ್ಣು ಕಾಣದ, ಕಿವಿ ಕೇಳದ 80 ವರ್ಷದ ವೃದ್ಧ ತಯಿಯನ್ನು ನಿಧಿ ಆಸೆಗಾಗಿಬಲಿ ಕೊಡಲು ಸಿದ್ಧತೆ ನಡೆಸಿದ್ದ. ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಮೇ 1 ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂದು ಮಂತ್ರವಾದಿಯಿಬ್ಬ ಹೇಳಿದ್ದನಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗಾಗಿ ಮಗ ಕೊಂಡಯ್ಯನ ಮಾದಶೆಟ್ಟಿ, 80 ವರ್ಷದ ಕಣ್ಣು ಕಾಣದ ಮತ್ತು ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಮನೆಯಲ್ಲೇ ತಯಾರ್ ನಡೆಸಿದ್ದಾನೆ. ಬೆಳಗ್ಗೆ ತನ್ನ ಮನೆಯಲ್ಲೇ 4 ಅಡಿ ಗುಂಡಿ ತೆಗೆದು ಮಾಟದ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ ಕುಂಕುಮ ಹಾಗೂ ಕಳಸವಿಟ್ಟು ಪೂಜೆ ಮಾಡಿದ್ದ. ಈ ಬಗ್ಗೆ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ತಾಯಿತನ್ನು ರಕ್ಷಿಸಿದ್ದಾರೆ. ಮಾದಶಟ್ಟಿ ಎಸ್ಕೇಪ್ ಆಗಲು ಯತ್ನಿಸಿದ್ದ ತಕ್ಷಣ ಅಲರ್ಟ್ ಆದ ಪೊಲೀಸರು ಮಾದಶೆಟ್ಟಿಯನ್ನು ಬಂಧಿಸಿದ್ದಾರೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular