HomeLatest NewsBIG NEWS: ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರಬಹುದು: ಅವರನ್ನೂ ವಿಚಾರಣೆ ನಡೆಸಬೇಕು: ಚಕ್ರವರ್ತಿ ಸೂಲಿಬೆಲೆ ಆಗ್ರಹ

BIG NEWS: ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರಬಹುದು: ಅವರನ್ನೂ ವಿಚಾರಣೆ ನಡೆಸಬೇಕು: ಚಕ್ರವರ್ತಿ ಸೂಲಿಬೆಲೆ ಆಗ್ರಹ

ಬೆಂಗಳೂರು: ಸೌಜನ್ಯ ತಾಯಿ ಕೂಡ ಷಡ್ಯಂತ್ರಕ್ಕೆ ಬಲಿಯಾಗಿರಬಹುದು. ಹಾಗಾಗಿ ಅವರನ್ನೂ ವಿಚಾರಣೆ ನಡೆಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಸುಜಾತಾ ಭಟ್ ಅವರನ್ನು ಹೇಗೆ ಆ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿತ್ತು. ಸುಜಾತಾ ಭಟ್ ಅವರನ್ನು ಮುಂದಿಟ್ಟುಕೊಂಡು ದಿನದಿಂದ ದಿನಕ್ಕೆ ಕಟ್ಟುಕಥೆ ಹೆಣೆದಿತ್ತು. ಇದೀಗ ಸುಜಾತಾ ಭಟ್ ಅವರೇ ಯಾರೋ ತನ್ನನು ಹೆದರಿಸಿ ಬೆದರಿಸಿ ಹೀಗೆ ಮಾಡಿಸಿದ್ದಾಗೆ ಹೇಳಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರವೆಸಗಿದವರು ಜೈಲು ಸೇರಬೇಕು ಎಂದು ನಾನೂ ಆಗ್ರಹ ಮಾಡುತ್ತೇನೆ. ಈ ಬದ್ಧತೆ ಇಟ್ಟುಕೊಂಡೇ ನಾನೂ ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್ ಮ್ಯಾನ್, ಸುಜಾತಾ ಭಟ್ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರಕ್ಕೆ ಒಳಗಾಗಿದ್ದಾರಾ? ಎಂಬ ಶಂಕೆ ಇದೆ. ಹಾಗಾಗಿ ಅವರನ್ನೂ ವಿಚಾರಣೆ ನಡೆಸಬೇಕು ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular