HomeLatest NewsALERT : ವಾಹನ ಸವಾರರೇ ಗಮನಿಸಿ : 'ಪೆಟ್ರೋಲ್ ಬಂಕ್' ನಲ್ಲಿ ಈ 6 ಸೌಲಭ್ಯ...

ALERT : ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ ನಲ್ಲಿ ಈ 6 ಸೌಲಭ್ಯ ಸಿಗದಿದ್ರೆ ದೂರು ಕೊಡಿ

ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ 06 ಉಚಿತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ಒದಗಿಸಬೇಕಾಗಿರುತ್ತದೆ. ವಾಹನದ ಟೈರ್ಗಳಿಗೆ ಉಚಿತ ಗಾಳಿಯ ಸೌಲಭ್ಯ, ಪೆಟ್ರೋಲ್ ಬಂಕ್ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಗ್ರಾಹಕರು ಮತ್ತು ಸಿಬ್ಬಂದಿ ಇಬ್ಬರಿಗೂ ಶೌಚಾಲಯ ಸೌಲಭ್ಯಗಳು, ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ಗಳ ಸೌಲಭ್ಯಗಳು, ಗ್ರಾಹಕರು ನಿಖರವಾದ ಇಂಧನವನ್ನು ಪಡೆಯುವಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಸಹಕರಿಸುವುದು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ನ ಗುಣಮಟ್ಟದ ಕುರಿತು ಗ್ರಾಹಕರಿಗೆ ಮಾಹಿತಿ ಒದಗಿಸುವುದು. ಪೆಟ್ರೋಲ್ ಬಂಕ್ ಆವರಣದಲ್ಲಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಗ್ರಾಹಕರಿಗೆ ಕಾಣುವಂತೆ ಸ್ಪಷ್ಟ ಪ್ರದರ್ಶನ ಮಾಡುವುದು.

ಪೆಟ್ರೋಲ್ ಬಂಕ್ಗಳಲ್ಲಿ ಸದರಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಗ್ರಾಹಕರು ಈ ಕೆಳಕಂಡ ಅಧಿಕಾರಿಗಳಿಗೆ ದೂರು ನೀಡಲು ಕೋರಿದೆ. ದೂರವಾಣಿ ಮತ್ತು ವಿಳಾಸ ಸಂಬಂಧಪಟ್ಟ ಪೆಟ್ರೋಲ್/ಡೀಸೆಲ್ ಬಂಕ್ಗಳಲ್ಲಿ ಲಭ್ಯವಿರುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಸೇಲ್ಸ್ ಆಫೀಸರ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಹಾಸನ-7022945432 ಸೇಲ್ಸ್ ಆಫೀಸರ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಹಾಸನ- 7033096059, ಸೇಲ್ಸ್ ಆಫೀಸರ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಹಾಸನ -9188692387.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular