HomeKarnatakaಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 'ಸಂಗೊಳ್ಳಿ ರಾಯಣ್ಣ' ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ : CM ಸಿದ್ದರಾಮಯ್ಯ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ಸಂಗೊಳ್ಳಿ ರಾಯಣ್ಣ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ : CM ಸಿದ್ದರಾಮಯ್ಯ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೆಂಪೇಗೌಡ ಪ್ರಾಧಿಕಾರ ಮಾಡಿದ್ದು ನಾವೇ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಗೆ ಶಿಫಾರಸ್ಸು ಮಾಡಿದ್ದು ಕೂಡ ನಾವೆಯೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಖೋಡೆ ವೃತ್ತದಲ್ಲಿ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಮಾತನಾಡಿದರು.

ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮಗಾಂಧಿ, ವಿವೇಕಾನಂದ ಎಲ್ಲ ಮಹಾತ್ಮರ ಆಶಯಗಳು ಸ್ಪೂರ್ಥಿಯಾಗಲಿ ಎನ್ನುವ ಕಾರಣಕ್ಕೆ ಅವರ ಹೆಸರುಗಳನ್ನು ಇಡಲಾಗುತ್ತದೆ.
ಸಮಾಜದ ಬದಲಾವಣೆಗೆ ಒಪ್ಪದ, ಸಮಾನ ಅವಕಾಶಗಳನ್ನು ಒಪ್ಪದ, ಅಸಮಾನತೆಯನ್ನು ಪೋಷಿಸಬೇಕು ಎನ್ನುವವರು ಈಗಲೂ ನಮ್ಮ ನಡುವೆಯೇ ಇದ್ದಾರೆ. ಇಂಥವರು ಬಹಳ ಅಪಾಯಕಾರಿ. ಇವರ ಬಗ್ಗೆ ಎಚ್ಚರದಿಂದ ಇರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಾತಂತ್ರ ಪ್ರೇಮಿ, ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಕುತಂತ್ರದಿಂದ ಬ್ರಿಟಿಷರಿಗೆ ಹಿಡಿದು ಕೊಡಲಾಯಿತು. ರಾಯಣ್ಣ ಕುರುಬ ಸಮುದಾಯದವರು ಎನ್ನುವ ಕಾರಣಕ್ಕೆ ನಾವು ಗೌರವಿಸುವುದಲ್ಲ, ಬದಲಿಗೆ ರಾಯಣ್ಣನ ದೇಶಪ್ರೇಮ ಮತ್ತು ತ್ಯಾಗದ ಕಾರಣದಿಂದಾಗಿ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು, ಗೌರವಿಸಬೇಕು. ಪ್ರತೀ ಮನೆಗಳಲ್ಲೂ ರಾಯಣ್ಣ ಜನಿಸಬೇಕು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೆಂಪೇಗೌಡ ಪ್ರಾಧಿಕಾರ ಮಾಡಿದ್ದು ನಾವೇ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಗೆ ಶಿಫಾರಸ್ಸು ಮಾಡಿದ್ದು ಕೂಡ ನಾವೆಯೇ. ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮಗಾಂಧಿ, ವಿವೇಕಾನಂದ ಎಲ್ಲ ಮಹಾತ್ಮರ ಆಶಯಗಳು ಸ್ಪೂರ್ಥಿಯಾಗಲಿ ಎನ್ನುವ ಕಾರಣಕ್ಕೆ ಅವರ ಹೆಸರುಗಳನ್ನು ಇಡಲಾಗುತ್ತದೆ ಎಂದರು.

ಆದರೆ ಇವರ ಆಶಯಗಳು ನಾಶ ಆಗಬೇಕು, ಸಂವಿಧಾನ ಇರಬಾರದು, ಅಸಮಾನತೆ ಮುಂದುವರೆಯಬೇಕು, ಯಾರೋ ದುಡಿದಿದ್ದನ್ನು ತಾವು ಕುಳಿತು ತಿನ್ನಬೇಕು ಎಂದು ಬಯಸುವವರು ಈಗಲೂ ನಮ್ಮ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಅವರ ಬಗ್ಗೆ ತೀವ್ರ ಎಚ್ಚರದಿಂದ ಇರಬೇಕು ಎಂದರು.

ನಮ್ಮಲ್ಲಿ ಒಬ್ಬ ರಾಜನನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಈ ಒಡಕನ್ನು ಬಳಸಿಕೊಂಡು ಘಜ್ನಿ ಮಹಮದ್ ಮತ್ತು ಬ್ರಿಟಿಷರು, ಫ್ರೆಂಚರು ಮುಂತಾದವರು ದಾಳಿ ಮಾಡಿದರು. ದೇಶದ ಅವಕಾಶಗಳು ಸಮಾಜದ ಎಲ್ಲಾ ವರ್ಗದವರಿಗೆ ಹಂಚಿಕೆ ಆಗಬೇಕು, ಸಂಪತ್ತಿನ ಹಂಚಿಕೆ ಆಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಬಸವಣ್ಣನವರ ಆಶಯವೂ ಅದೇ ಆಗಿತ್ತು. ಕುವೆಂಪು ಅವರ ಆಶಯವೂ ಆಗಿತ್ತು. ಈ ಎಲ್ಲರ ಆಶಯ ರಾಯಣ್ಣನ ಹೋರಾಟದಲ್ಲೂ ಇತ್ತು ಎಂದರು.

ಆದಿ ಚುಂಚನಗಿರಿ ಮಹಾ ಸಂಸ್ಥಾನದ ಧರ್ಮಗುರು ನಿರ್ಮಲಾನಂದ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular