ಇಂದಿನಿಂದ ( ಜನವರಿ 16 ) ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಿದ್ದು, ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ದೆ ಶೇರ್ ಬೌಲಿಂಗ್ ಆರಿಸಿಕೊಂಡಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಕರಣ್ ಆರ್ಯನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.2 ಓವರ್‌ಗಳಲ್ಲಿ 170 ರನ್‌ಗೆ ಆಲ್‌ಔಟ್ ಆಗಿ ಪಂಜಾಬ್‌ಗೆ 171 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ.
ಕರ್ನಾಟಕ ಬುಲ್ಡೋಜರ್ಸ್ ಪರ ನಾಯಕ ಕಿಚ್ಚ ಸುದೀಪ್ ಡಕ್‌ಔಟ್ ಆದರೆ, ಭರವಸೆಯ ಆಟಗಾರ ರಾಜೀವ್ ಹನು ಸಹ ಡಕ್‌ಔಟ್ ಆದರು. ಇನ್ನು ಡಾರ್ಲಿಂಗ್ ಕೃಷ್ಣ 14 ರನ್ ಗಳಿಸಿದರೆ, ಅಬ್ಬರಿಸಿ ಬೊಬ್ಬರಿದ ಕರಣ್ ಆರ್ಯನ್ 33 ಎಸೆತಗಳಲ್ಲಿ 83 ರನ್ ಚಚ್ಚಿದರು. ಬೌಲರ್ ಸುಯಶ್ ಎಸೆದ 14ನೇ ಓವರ್‌ನಲ್ಲಿ 22 ರನ್ ಚಚ್ಚಿದ ಕರಣ್ ಆರ್ಯನ್ ತಂಡದ ರನ್ ಮೊತ್ತ ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

