HomeKarnatakaಕುಖ್ಯಾತ ರೌಡಿಶೀಟರ್ ಗಳ ಜೊತೆ ಲಿಂಕ್ ಆರೋಪ: ಸಿಸಿಬಿ ಇನ್ಸ್ ಪೆಕ್ಟರ್ ಸಸ್ಪೆಂಡ್

ಕುಖ್ಯಾತ ರೌಡಿಶೀಟರ್ ಗಳ ಜೊತೆ ಲಿಂಕ್ ಆರೋಪ: ಸಿಸಿಬಿ ಇನ್ಸ್ ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ರೌಡಿಶೀಟರ್ ಗಳ ಜೊತೆ ಲಿಂಕ್ ಹೊಂದಿದ್ದ ಆರೋಪದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಓರ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಜ್ಯೋತಿರ್ಲಿಂಗ ಅಮಾನತುಗೊಂಡ ಸಿಸಿಬಿ ಇನ್ಸ್ ಪೆಕ್ಟರ್. ನಟೋರಿಯಸ್ ರೌಡಿಗಳ ಬಗ್ಗೆ ಮಾಹಿತಿ ಸಂಗ್ರಿಹಿಸುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು.ಅಲ್ಲದೇ ಕುಖ್ಯಾತ ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವಲನಗಳ ಬಗ್ಗೆ ವರದಿ ನೀಡಲು ತಿಳಿಸಿದ್ದರು. ಆದರೆ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಯಾವುದೇ ವರದಿ ನೀಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಗಳು ಜ್ಯೋತಿರ್ಲಿಂಗ ವಿರುದ್ಧ ಪೊಲಿಸ್ ಆಯುಕ್ತರಿಗೆ ದೂರು ನೀಡಿ ವರದಿ ನಿಡಿದ್ದಾರೆ. ವರದಿ ಆಧರಿಸಿ ಪೊಲೀಸ್ ಆಯುಕ್ತರು ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಅವರನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular