ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆ ಕೊನೆಗೂ ಮುಗಿದಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ (ಸೆಷನ್ 1) ಫಲಿತಾಂಶವನ್ನು ಇಂದು ಅಧಿಕೃತವಾಗಿ ಹೊರಹಾಕಿದೆ. ಈ ಬಾರಿ ಒಟ್ಟು ಶೇ. 93.70 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಒಟ್ಟಾರೆ ಪಾಸ್ ಪರ್ಸೆಂಟೇಜ್: 93.70%
ಹುಡುಗಿಯರ ಸಾಧನೆ: 94.99% (ಪ್ರತಿಬಾರಿಯಂತೆ ಈ ಬಾರಿಯೂ ಹುಡುಗಿಯರದೇ ಮೇಲುಗೈ)
ಹುಡುಗರ ಸಾಧನೆ: 92.6%
ಪರೀಕ್ಷೆ ಬರೆದವರು: ಸುಮಾರು 25 ಲಕ್ಷ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳ ಜೊತೆಗೆ ಆ್ಯಪ್‌ಗಳ ಮೂಲಕವೂ ಅಂಕಪಟ್ಟಿಯನ್ನು ಪಡೆಯಬಹುದು:
ಅಧಿಕೃತ ವೆಬ್‌ಸೈಟ್:
cbse.gov.in ಅಥವಾ results.cbse.nic.in
DigiLocker (ಡಿಜಿಲಾಕರ್): ಅತಿ ವೇಗವಾಗಿ ಡಿಜಿಟಲ್ ಅಂಕಪಟ್ಟಿ ಪಡೆಯಲು ಇದು ಸುಲಭ ಮಾರ್ಗ.
UMANG App: ಉಮಾಂಗ್ ಆ್ಯಪ್ ಮೂಲಕವೂ ಫಲಿತಾಂಶ ವೀಕ್ಷಿಸಬಹುದು.
SMS & IVRS: ಇಂಟರ್ನೆಟ್ ಇಲ್ಲದಿದ್ದರೂ ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಲು ಅವಕಾಶವಿದೆ.
ಡಿಜಿಲಾಕರ್ (DigiLocker) ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿ:
ವೆಬ್‌ಸೈಟ್‌ಗಿಂತಲೂ ವೇಗವಾಗಿ ಅಂಕಪಟ್ಟಿ ಪಡೆಯಲು ಡಿಜಿಲಾಕರ್ ಅತ್ಯುತ್ತಮ ಮಾರ್ಗ.
ಮೊದಲು digilocker.gov.in ಗೆ ಭೇಟಿ ನೀಡಿ ಅಥವಾ ಆ್ಯಪ್ ಓಪನ್ ಮಾಡಿ.
ನಿಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
‘Education’ ವಿಭಾಗದಲ್ಲಿ CBSE ಆಯ್ಕೆ ಮಾಡಿ.
ನಂತರ ‘Class X Marksheet 2026’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರೋಲ್ ಸಂಖ್ಯೆ, ಶಾಲಾ ಕೋಡ್ ಮತ್ತು ಸೆಕ್ಯೂರಿಟಿ ಪಿನ್ ನಮೂದಿಸಿ Submit ನೀಡಿ.
ತಕ್ಷಣವೇ ನಿಮ್ಮ ಡಿಜಿಟಲ್ ಅಂಕಪಟ್ಟಿ ಲಭ್ಯವಾಗುತ್ತದೆ
ಎಸ್‌ಎಂಎಸ್ (SMS) ಮೂಲಕ ರಿಸಲ್ಟ್ ಪಡೆಯಿರಿ:
ಇಂಟರ್ನೆಟ್ ಇಲ್ಲದಿದ್ದರೂ ನಿಮ್ಮ ಫೋನ್ ಮೂಲಕವೇ ಫಲಿತಾಂಶ ತಿಳಿಯಬಹುದು.
ನಿಮ್ಮ ಫೋನ್‌ನ ಮೆಸೇಜ್ ಬಾಕ್ಸ್ ತೆರೆಯಿರಿ.
CBSE10 <ರೋಲ್ ಸಂಖ್ಯೆ> <ಜನ್ಮ ದಿನಾಂಕ> <ಶಾಲಾ ಸಂಖ್ಯೆ> <ಕೇಂದ್ರ ಸಂಖ್ಯೆ> ಈ ಸ್ವರೂಪದಲ್ಲಿ ಟೈಪ್ ಮಾಡಿ. (ಉದಾ: CBSE10 1234567 15052010 81111 4444)
ಈ ಸಂದೇಶವನ್ನು 7738299899 ಗೆ ಕಳುಹಿಸಿ.
ಕೆಲವೇ ಕ್ಷಣಗಳಲ್ಲಿ ನಿಮ್ಮ ಅಂಕಗಳು ಎಸ್‌ಎಂಎಸ್ ರೂಪದಲ್ಲಿ ನಿಮ್ಮ ಫೋನ್‌ಗೆ ಬರುತ್ತದೆ.

