HomeJobsCBI Recruitment 2026:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 350 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CBI Recruitment 2026:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 350 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಯಾವೆಲ್ಲಾ ಹುದ್ದೆಗಳಿವೆ?

ಈ ನೇಮಕಾತಿ ಅಧಿಸೂಚನೆಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮುಖ್ಯವಾಗಿ ಕೆಳಗಿನ ಎರಡು ವಿಭಾಗಗಳಲ್ಲಿ ಅಧಿಕಾರಿಗಳ ನೇಮಕ ನಡೆಯಲಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer)

ಮಾರ್ಕೆಟಿಂಗ್ ಆಫೀಸರ್ (Marketing Officer)

ಕರ್ತವ್ಯ ಸ್ಥಳ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದೆಲ್ಲೆಡೆ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 350 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ

ಫಾರಿನ್ ಎಕ್ಸ್ಚೇಂಜ್ ಆಫೀಸರ್ 50

ಮಾರ್ಕೆಟಿಂಗ್ ಆಫೀಸರ್ 300

ಶೈಕ್ಷಣಿಕ ಅರ್ಹತೆ :

ಫಾರಿನ್ ಎಕ್ಸ್ಚೇಂಜ್ ಆಫೀಸರ್ – ಪದವಿ, ಸಿಎಫ್ಎ/ಸಿಎ, ಎಂಬಿಎ.

ಮಾರ್ಕೆಟಿಂಗ್ ಆಫೀಸರ್ – ಪದವಿ/ ಎಂಬಿಎ/ ಪಿಜಿಡಿಬಿಎಂ/ ಪಿಜಿಪಿಎಂ/ ಪಿಜಿಡಿಎಂ

ವಯೋಮಿತಿ (01/01/2026ಕ್ಕೆ ಅನ್ವಯಿಸುವಂತೆ)

ಫಾರಿನ್ ಎಕ್ಸ್ಚೇಂಜ್ ಆಫೀಸರ್: ಕನಿಷ್ಠ 25 ವರ್ಷ – ಗರಿಷ್ಠ 35 ವರ್ಷ

ಮಾರ್ಕೆಟಿಂಗ್ ಆಫೀಸರ್: ಕನಿಷ್ಠ 22 ವರ್ಷ – ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ: 5 ವರ್ಷ

ಒಬಿಸಿ ಅಭ್ಯರ್ಥಿಗಳು: 3 ವರ್ಷ

ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷ

ಆಯ್ಕೆ ವಿಧಾನ

  • ಆನ್‌ಲೈನ್ ಪರೀಕ್ಷೆ
  • ಸಂದರ್ಶನ

ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮಂಗಳೂರು

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಹಂತಗಳು:

ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಪ್ರಕಟಿಸಿದ ಅಧಿಕೃತ ಅಧಿಸೂಚನೆಯನ್ನು ಜಾಗರೂಕವಾಗಿ ಓದಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ “Apply Online” ಲಿಂಕ್ ಕ್ಲಿಕ್ ಮಾಡಿ ಅರ್ಜಿ ಫಾರ್ಮ್ ತೆರೆದುಕೊಳ್ಳಬೇಕು.

ಅರ್ಜಿಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು (ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಸರಿಯಾಗಿ ಭರ್ತಿ ಮಾಡಿ ಪರಿಶೀಲಿಸಬೇಕು.

ಅಗತ್ಯವಿದ್ದಲ್ಲಿ ಪ್ರಮಾಣಪತ್ರ/ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅರ್ಜಿ ಶುಲ್ಕ

ಪ.ಜಾತಿ / ಪ.ಪಂಗಡ / ಪಿಡಬ್ಲ್ಯೂಬಿಡಿ / ಮಹಿಳಾ ಅಭ್ಯರ್ಥಿಗಳು: ₹175
ಇತರ ಅಭ್ಯರ್ಥಿಗಳು: ₹850

ಶುಲ್ಕ ಪಾವತಿ ವಿಧಾನ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಆನ್‌ಲೈನ್ ಪಾವತಿ ಮಾಡಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ: ಜನವರಿ 20, 2026

ಅರ್ಜಿ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 03, 2026

ಆನ್‌ಲೈನ್ ಪರೀಕ್ಷೆ (ತಾತ್ಕಾಲಿಕ): ಫೆಬ್ರವರಿ / ಮಾರ್ಚ್ 2026

ಸಂದರ್ಶನ (ತಾತ್ಕಾಲಿಕ): ಮಾರ್ಚ್ / ಏಪ್ರಿಲ್ 2026

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular