ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚರಕ್ಕೆ ಸಂಬಂಧಿಸಿದಂತೆ ಕಾರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತೆ ಆಘಾತ ನೀಡಿದೆ. ತಮಿಳುನಾಡಿಗೆ ಮತ್ತೆ ೧೫ ದಿನಗಳ ಕಾಲ ಕಾವೇರಿ ನೀರು ಬಿಡುವಂತೆ ಆದೇಶ ನೀಡಿದೆ.
ನವದೆಹಲಿಯಲ್ಲಿ CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಇನ್ನೂ 15 ದಿನಗಳ ಕಾಲ ಪ್ರತಿದಿನ 6000 ಕ್ಯೂಸೆಕ್ ನೀರಿನಂತೆ ತಮಿಳುನಾದಿಗೆ ಕಾವೇರಿ ನೀರು ಹರಿಸಬೇಕು ಎಂದು ಸೂಚಿಸಿದೆ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕಾವೇರಿ ಕೊಳ್ಳದಲ್ಲಿ ನೀರಿನ ಅಭಾವವಿದ್ದು, ಇಲ್ಲಿನ ರೈತರೇ ಬೆಳೆಗಳಿಗೆ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ. ಕೆ.ಆರ್.ಎಸ್ ನಲ್ಲಿ ನೀರಿನ ಸಂಗ್ರಹವಿಲ್ಲ. ಈಗಾಗಲೇ ಕರ್ನಾಟಕ ಪ್ರತಿದಿನ 9000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಮತ್ತೆ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯದ ಅಧಿಕಾರಿಗಳು ವಾದ ಮಂಡಿಸಿದರು. ಕರ್ನಾಟಕದಲ್ಲಿ ನೀರಿನ ಅಭಾವವಿರುವುದರಿಂದ ಪ್ರತಿದಿನ ಹರಿಸುವ ನೀರಿನ ಪ್ರಮಾಣವನ್ನು 6000 ಕ್ಯೂಸೆಕ್ ಗೆ ತಗ್ಗಿಸಿ ಆದೇಶ ಹೊರಡಿಸಲಾಗಿದೆ ಎಂದು CWRC ತಿಳಿಸಿದೆ.
CWRC ಆದೇಶ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಬರಗಾಲದ ಸಂದರ್ಭದಲ್ಲಿ ನೀರಿನ ಅಭಾವ ಎದುರಾಗಿರುವಾಗ ಸಮಿತಿ ಹೊರಡಿಸುತ್ತಿರುವ ಈ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ಮಧ್ಯಾಹ್ನ CWMA ಸಭೆ ನಡೆಯಲ್ಲಿದ್ದು, ಅಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಗಲಿದೆಯೇ? ಕಾದುನೋಡಬೇಕಿದೆ.

