HomeKarnatakaಕಾವೇರಿ 6ನೇ ಹಂತದ ಹೆಸರಿನಲ್ಲಿ ₹7,000 ಕೋಟಿ ಹೊಸ ಲೂಟಿಗೆ ಸಿದ್ಧವಾಗಿದೆ ಕಾಂಗ್ರೆಸ್ ಸರ್ಕಾರ:...

ಕಾವೇರಿ 6ನೇ ಹಂತದ ಹೆಸರಿನಲ್ಲಿ ₹7,000 ಕೋಟಿ ಹೊಸ ಲೂಟಿಗೆ ಸಿದ್ಧವಾಗಿದೆ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಕಿಡಿ

ಬೆಂಗಳೂರು: 30% ಲೆಕ್ಕಕ್ಕೆ ಸಿಗದ ನೀರು, 100% ಲೆಕ್ಕಕ್ಕೆ ಸಿಗುವ ಕಮಿಷನ್! ಕಾವೇರಿ 6ನೇ ಹಂತದ ಹೆಸರಿನಲ್ಲಿ ₹7,000 ಕೋಟಿ ಹೊಸ ಲೂಟಿಗೆ ಸಿದ್ಧವಾಗಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಗಳ ಹೊಣೆ ಹೊತ್ತಿದ್ದ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರ ಅಸಮರ್ಥ ಆಡಳಿತದಿಂದಾಗಿ ಇಂದು ಬೆಂಗಳೂರಿನಲ್ಲಿ 30% ಕಾವೇರಿ ನೀರು ಪೋಲಾಗುತ್ತಿದೆ ಎಂದು ಆರೋಪಿಸಿದರು.

* 30% ನೀರು ಪೋಲು – ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿಗೆ ಪೂರೈಕೆಯಾಗುವ ಒಟ್ಟು ಕುಡಿಯುವ ನೀರಿನಲ್ಲಿ ಬರೊಬ್ಬರಿ 30% ನೀರು ‘ಲೆಕ್ಕಕ್ಕೆ ಸಿಗದ ನೀರು’ (Non-Revenue Water) ಆಗಿ ಸೋರಿಕೆಯಾಗುತ್ತಿದೆ. ಜಲಮಂಡಳಿಯ ದುರಾಡಳಿತದಿಂದ ದಿನನಿತ್ಯ ಕೋಟ್ಯಂತರ ಲೀಟರ್ ಕುಡಿಯುವ ನೀರು ಮಣ್ಣು ಪಾಲಾಗುತ್ತಿದ್ದರೂ ಸರ್ಕಾರ ಭ್ರಷ್ಟಾಚಾರದ ನಿದ್ದೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

* ಸೋರಿಕೆ ತಡೆಯಲು ಯೋಗ್ಯತೆಯಿಲ್ಲ, ₹7,000 Crore ಹೊಸ ಹಗರಣಕ್ಕೆ ನಾಂದಿ!

ಹಾಲಿ ಸರಬರಾಜು ಜಾಲದ ಸೋರಿಕೆ ಹಾಗೂ ಅಕ್ರಮ ಸಂಪರ್ಕಗಳನ್ನು ತಡೆಯುವ ತಾಕತ್ತಿಲ್ಲದ ಈ ಸರ್ಕಾರ, ‘Cauvery 6th Phase’ ಹೆಸರಿನಲ್ಲಿ ₹7,000 ಕೋಟಿ ವೆಚ್ಚದ ಹೊಸ ಯೋಜನೆ ಘೋಷಿಸಲು ಹೊರಟಿದೆ.

ಮೊದಲು ಇರುವ ಮೂಲಸೌಕರ್ಯ ಸರಿಪಡಿಸುವ ಬದಲು, ಕಮಿಷನ್ ಹೊಡೆಯುವುದೇ ಈ ಇಬ್ಬರೂ ಸಚಿವರ ಏಕೈಕ ಆದ್ಯತೆಯಾಗಿದೆ ಎಂದು ಕಿಡಿಕಾರಿದ್ದಾರೆ.

* ಜನರಿಗೆ ಬಾಯಾರಿಕೆ, ಸರ್ಕಾರಕ್ಕೆ ಕಮಿಷನ್ ಚಿಂತೆ

ಬೆಂಗಳೂರಿನ ಜನತೆ ಹನಿ ನೀರಿಗೂ ಪರದಾಡುತ್ತಿರುವಾಗ, ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ನೀರಲ್ಲಿ ಹೋಮ ಮಾಡುತ್ತಿದೆ. ಹಳೆಯ ಪೈಪ್‌ಲೈನ್ ಸರಿಪಡಿಸಲು ಯೋಗ್ಯತೆಯಿಲ್ಲದವರಿಗೆ ₹7,000 ಕೋಟಿ ಹೊಸ ಯೋಜನೆ ಬೇಕಿರುವುದು ಕೇವಲ ಕಮಿಷನ್ ಹೊಡೆಯಲು ಮಾತ್ರ!

ಸಚಿವ ಕೃಷ್ಣ ಭೈರೇಗೌಡರೇ, ಈ ಕೆಲಸಕ್ಕೆ ಬಾರದ ರೀಲ್ಸ್ ಮಾಡುವ ಹುಚ್ಚು, ಇಂಟರ್ವ್ಯೂಗಳಲ್ಲಿ ದೊಡ್ಡ ದೊಡ್ಡ ಮಾತಾಡಿ ಪೋಸ್ ಕೊಡುವ ನಾಟಕ ಬಿಟ್ಟು ಮಾಡಬೇಕಾಗಿರುವ ಕೆಲಸ ಮಾಡಿ. ಪೋಲಾಗುತ್ತಿರುವ ಅಮೂಲ್ಯವಾದ ನೀರನ್ನು ಉಳಿಸುವ ಕಡೆ ಗಮನ ಕೊಡಿ.

ಬೆಂಗೂರಿಗರ ಕುಡಿಯುವ ನೀರನ್ನೂ ತಮ್ಮ ಕಮಿಷನ್ ದಂಧೆಗೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular