HomeBeauty'ಸೌಂದರ್ಯ' ವೃದ್ಧಿಸಲು ಉಪಯುಕ್ತ ಹರಳೆಣ್ಣೆ

‘ಸೌಂದರ್ಯ’ ವೃದ್ಧಿಸಲು ಉಪಯುಕ್ತ ಹರಳೆಣ್ಣೆ

ಹರಳೆಣ್ಣೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದನ್ನು ಬಳಸಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ.

ಹೆರಿಗೆ ಬಳಿಕ ಹೊಟ್ಟೆಯಲ್ಲಿ ಉಳಿಯುವ ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು ನಿತ್ಯ ಹೊಟ್ಟೆಯ ಭಾಗಕ್ಕೆ ಹರಳೆಣ್ಣೆ ಹಚ್ಚಿ. ಮೂವತ್ತು ನಿಮಿಷದ ಬಳಿಕ ಸ್ನಾನ ಮಾಡಿ. ಇದನ್ನು ಸೊಂಟಕ್ಕೆ ಹಚ್ಚುವುದರಿಂದ ಉಳುಕಿದ ನೋವು ಕೂಡಾ ಕಡಿಮೆಯಾಗುತ್ತದೆ.

ರಾತ್ರಿ ಮಲಗುವ ಮುನ್ನ ಮುಖಕ್ಕೆ ಕಣ್ಣಿನ ಕೆಳಭಾಗಕ್ಕೆ ಹಚ್ಚಿದರೆ ಮೊಡವೆಗಳು ದೂರವಾಗುತ್ತವೆ ಮಾತ್ರವಲ್ಲ ಡಾರ್ಕ್ ಸರ್ಕಲ್ ಕೂಡಾ ಇಲ್ಲವಾಗುತ್ತದೆ. ಮುಖದ ಸುಕ್ಕನ್ನು ತೆಗೆದುಹಾಕಿ ನಿಮ್ಮವಯಸ್ಸನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಯಿ ಹುಣ್ಣಿನ ಸಮಸ್ಯೆ ಇದ್ದವರು ಆ ಜಾಗಕ್ಕೆ ಒಂದೆರಡು ಹನಿ ಎಣ್ಣೆ ಹಾಕಿಕೊಂಡರೆ ಸಾಕು, ಒಂದೇ ದಿನದಲ್ಲಿ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಕೂದಲಿಗೆ ಕಂಡಿಷನರ್ ಆಗಿ ಕೆಲಸ ಮಾಡುವ ಇದು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ. ಕೂದಲು ಉದುರುವುದೂ ದೂರವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular