ಮೈಸೂರು: ಅಕ್ರಮವಾಗಿ ಬಾಂಗ್ಲಾ ವಲಸಿಗರು ಮೈಸೂರಿಗೆ ಬಂದಿದ್ದಾರೆ ಎಂದು ಆರೋಪಿಸಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ಮತ್ತು ದಾಖಲೆ ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ 6 ಕಾರ್ಯಕರ್ತರ ವಿರುದ್ಧ ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳದಿಂದ ಹೌರಾ ಎಕ್ಸ್ಪ್ರೆಸ್ ರೈಲು ಭಾನುವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದೆ. ಅದರಲ್ಲಿದ್ದ 36 ಪ್ರಯಾಣಿಕರನ್ನು ರೈಲ್ವೆ ಪ್ರವೇಶ ದ್ವಾರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು ಅವರ ಬ್ಯಾಗ್ ಮತ್ತು ದಾಖಲೆ ಪರಿಶೀಲಿಸಿದ್ದಾರೆ.
ಈ ವೇಳೆ ಪೊಲೀಸರು ಆಗಮಿಸಿ 36 ಶಂಕಿತ ಪ್ರಯಾಣಿಕರ ದಾಖಲಾತಿ ಪರಿಶೀಲಿಸಿ ಅವರು ಬಾಂಗ್ಲಾದೇಶದವರಲ್ಲ ಎಂದು ಖಚಿತಪಡಿಸಿಕೊಂಡು ಥಳಿಸಿದ್ದಾರೆ. ಹೀಗೆ ಪ್ರಯಾಣಿಕರ ದಾಖಲೆ ಮತ್ತು ಬ್ಯಾಕ್ ಪರಿಶೀಲಿಸಿದ ಹಿಂದೂ ಜಾಗರಣ ವೇದಿಕೆಯ ಆರು ಜನ ಕಾರ್ಯಕರ್ತರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

