HomeKarnatakaBREAKING NEWS: ಕಾರು ಹಾಗೂ ಲಾರಿ ಭೀಕರ ಅಪಘಾತ: ಮೂವರು ದುರ್ಮರಣ

BREAKING NEWS: ಕಾರು ಹಾಗೂ ಲಾರಿ ಭೀಕರ ಅಪಘಾತ: ಮೂವರು ದುರ್ಮರಣ

ಕಲಬುರಗಿ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲುಕಿನ ಮಗದಂಪುರ ಬಳಿ ನಡೆದಿದೆ.

ಬೀದರ್ ನಿಂದ ತೆಲಂಗಾಣದ ಧಾರೂರ್ ಗೆ ತೆರಳುತ್ತಿದ್ದ ಕಾರು ಹಾಗೂ ತೆಲಂಗಾಣದಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಿನಾಶ್ (24), ಅಭಿಷೇಕ್ (26) ಹಾಗೂ ಸಂಜೀವ್ (40) ಮೃತರು.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular