HomeAutoBIG NEWS: ಕಾರು ಅಪಘಾತ: ನವವಿವಾಹಿತೆ ದುರ್ಮರಣ

BIG NEWS: ಕಾರು ಅಪಘಾತ: ನವವಿವಾಹಿತೆ ದುರ್ಮರಣ

ಮಂಗಳೂರು: ಹಬ್ಬದ ಸಂದರ್ಭದಲ್ಲಿಯೇ ಸಾಲು ಸಾಲು ಅಪಘಾತ ಪ್ರಕರಣಗಳು ಬೆಳಕಿಗೆ ಬಂದಿವೆ. ಕಾರು ಅಪಘಾತದಲ್ಲಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ತಲಪಾಡಿ ಗ್ರಾಮದಲ್ಲಿ ಕಾರು ಅಪಘಾತ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಮಾನಸ ಸಾವನ್ನಪ್ಪಿದ್ದಾರೆ. ಪತಿ ಅನೀಶ್ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಅನೀಶ್ ಅವರನ್ನು ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿನತ್ತ ನವದಂಪತಿ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿ ಬಿದ್ದಿದೆ. ಈ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ ಗೂ ಕಾರು ಗುದ್ದಿದೆ. ಸ್ಥಳದಲ್ಲೇ ಮಾನಸಾ ಸಾವನ್ನಪ್ಪಿದ್ದಾರೆ. ಪತಿ ಸ್ಥಿತಿ ಗಂಭೀರವಾಗಿದೆ. ದಂಪತಿ ಮಂಗಳೂರಿನ ಕಂಪನಿಯಲ್ಲಿ ಕಾರ್ಯನಿವಹಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಲ್ಕಾರ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular