HomeLatest NewsBIG NEWS: 10 ವರ್ಷದ ಬಾಲಕನ ಮೇಲೆ ಹರಿದು ಹೋದ ಕಾರು: ಸ್ಥಳದಲ್ಲೇ ದುರ್ಮರಣ

BIG NEWS: 10 ವರ್ಷದ ಬಾಲಕನ ಮೇಲೆ ಹರಿದು ಹೋದ ಕಾರು: ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಹತ್ತು ವರ್ಷದ ಬಾಲಕನ ಮೇಲೆ ಕಾರೊಂದು ಹರಿದು ಹೋದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಅಥಣಿ ಪಟ್ಟಣದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ. ಅಥಣಿಯ ರಡ್ಡೆರಟ್ಟಿ ಗ್ರಾಮದ ಅಗಸ್ತ್ಯ ಕನಮಡಿ ಮೃತ ಬಾಲಕ. ರಸ್ತೆ ಬದಿ ಬಾಲಕ ನಡೆದು ಹೋಗುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದು, ಆತನ ಮೇಲೆಯೇ ಹರಿದು ಹೋಗಿದೆ. ಸ್ಥಳದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.

ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದ. ಸಿಸಿಟಿವಿ ಆಧಾರದ ಮೇಲೆ ಕಾರು ಚಾಲಕ ಆರೋಪಿ ರಾಹುಲ್ ಹಂಡೇಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular