ಮಂಡ್ಯ: ರಸ್ತೆ ಬಳಿ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೇ ತಾಲೂಕಿನ ಅಶೋಕ್ ನಗರದ ಫುಡ್ ಪಾರ್ಕ್ ಬಳಿ ನಡೆದಿದೆ.
ಪಿಬಿ ಮಂಚೇನಹಳ್ಳಿ ನಿವಾಸಿ ಪ್ರಜ್ವಲ್ ಮೃತ ಯುವಕ. ಫುಡ್ ಪಾರ್ಕ್ ಬಳಿ ರಸ್ತೆಯಲ್ಲಿ ಹಾಕಿದ್ದ ರಾಗಿ ಒಕ್ಕಣೆಗೆಯಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರು ಪಲ್ಟಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

