HomeCrimeಕೆನಡಾದಲ್ಲಿ ಭಾರತೀಯ ಯುವತಿ ಮೇಲೆ ಹಲ್ಲೆ ; ಆಘಾತಕಾರಿ ವಿಡಿಯೋ ವೈರಲ್ | Watch

ಕೆನಡಾದಲ್ಲಿ ಭಾರತೀಯ ಯುವತಿ ಮೇಲೆ ಹಲ್ಲೆ ; ಆಘಾತಕಾರಿ ವಿಡಿಯೋ ವೈರಲ್ | Watch

ಕೆನಡಾದ ಕ್ಯಾಲ್ಗರಿಯಲ್ಲಿರುವ ಬೋ ವ್ಯಾಲಿ ಕಾಲೇಜು ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ‘ಭಾರತೀಯ’ ಯುವತಿಯನ್ನು ಹಿಂಸಾತ್ಮಕವಾಗಿ ತಳ್ಳಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನೀಲಿ ಬಣ್ಣದ ಜಾಕೆಟ್ ಮತ್ತು ಗಾಢ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬ ಕಪ್ಪು ಬಟ್ಟೆ ಧರಿಸಿ ಬ್ಯಾಗ್ ಹೊತ್ತಿದ್ದ ವಿದ್ಯಾರ್ಥಿನಿಯಂತಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ವ್ಯಕ್ತಿ ಯುವತಿಯ ಕುತ್ತಿಗೆ ಹಿಸುಕಲು ಪ್ರಯತ್ನಿಸಿದ ದೃಶ್ಯಗಳು ವಿಡಿಯೊದಲ್ಲಿವೆ. ಆದರೆ, ಆತ ಯುವತಿಯ ಮೇಲೆ ಹಲ್ಲೆ ನಡೆಸಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ರೈಲು ನಿಲ್ದಾಣದಲ್ಲಿದ್ದ ಇತರರು ಸಹಾಯಕ್ಕೆ ಬರಲಿಲ್ಲ.

ಈ ಘಟನೆಯಲ್ಲಿ ಹಲ್ಲೆಗೊಳಗಾದ ಯುವತಿ ಭಾರತೀಯ ಮೂಲದವಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುರುಕ್ಷೇತ್ರದ 23 ವರ್ಷದ ಯುವತಿಯನ್ನು ಕೆನಡಾದ ಸರೆ ಪ್ರದೇಶದಲ್ಲಿ ಕೊಲೆ ಮಾಡಲಾಗಿತ್ತು. ಆಕೆ ಗಿಲ್ಡ್‌ಫೋರ್ಡ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular