ಬೆಂಗಳೂರು: ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿನ ರಸ್ತೆಗಳು ಮತ್ತು ಒಳಚರಂಡಿಗಳನ್ನು ಪಂಚಾಯಿತಿ ವಶಕ್ಕೆ ಪಡೆಯುವ ವಿಧೇಯಕಕ್ಕೆ ಅಸ್ತು ಎಂದು ಹೇಳಲಾಗಿದೆ.
ಬಡಾವಣೆಗಳಲ್ಲಿನ ಕೆಲವು ರಸ್ತೆಗಳು ಖಾಸಗಿ ವ್ಯಕ್ತಿಗಳ ಹೆಸರಲ್ಲಿವೆ. ಜನರ ಆರೋಗ್ಯ ಮತ್ತು ಅನುಕೂಲದ ದೃಷ್ಟಿಯಿಂದ ಇಂತಹ ರಸ್ತೆ ಚರಂಡಿಗಳ ದುರಸ್ತಿ ಅಗತ್ಯವೆಂದು ಕಂಡುಬಂದರೆ ಅವುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಬಿಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಧಿಕೃತ ನಿವೇಶನಗಳು, ಮನೆಗಳು, ಕಟ್ಟಡಗಳಿಗೆ ಬಿ ಖಾತಾ ವಿತರಿಸಲು ಈ ಬಿಲ್ ನಿಂದ ಸಹಾಯವಾಗಲಿದೆ.

