HomeKarnatakaBIG NEWS: ಕಾಂಗ್ರೆಸ್ ಡಿಎನ್ಎ ಶೆಟ್ಟರ್ ಗೆ ಮ್ಯಾಚ್ ಆಗಲ್ಲ, ಮ್ಯಾಚ್ ಆಗದ DNA ಜೊತೆ...

BIG NEWS: ಕಾಂಗ್ರೆಸ್ ಡಿಎನ್ಎ ಶೆಟ್ಟರ್ ಗೆ ಮ್ಯಾಚ್ ಆಗಲ್ಲ, ಮ್ಯಾಚ್ ಆಗದ DNA ಜೊತೆ ಬಹಳ ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ; ಟಾಂಗ್ ನೀಡಿದ ಸಿ.ಟಿ.ರವಿ

ಚಿಕ್ಕಮಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಯಾವ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು ಎಂಬುದು ಗೊತ್ತಿಲ್ಲ. ಮ್ಯಾಚ್ ಆಗದ ಡಿಎನ್ಎ ಜೊತೆ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಡಿಎನ್ಎ, ಜಗದೀಶ್ ಶೆಟ್ಟರ್ ಡಿಎನ್ಎ ಮ್ಯಾಚ್ ಆಗಲ್ಲ. ಜಗದೀಶ್ ಶೆಟ್ಟರ್ ತಂದೆ, ಚಿಕ್ಕಪ್ಪ ಜನಸಂಘದ ಕಾಲದಿಂದಲೂ ಪಕ್ಷದ ಜೊತೆಗಿದ್ದವರು. ಶೆಟ್ಟರ್ ಏಕೆ ಕಾಂಗ್ರೆಸ್ ಸೇರುವ ನಿರ್ಣಯ ಮಾಡಿದರೋ ಗೊತ್ತಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಡಿಎನ್ಎ ಗೂ, ಜಗದೀಶ್ ಶೆಟ್ಟರ್ ಡಿಎನ್ಎ ಗೂ ಮ್ಯಾಚ್ ಆಗಲ್ಲ, ಮಿಸ್ ಮ್ಯಾಚ್ ಆಗುತ್ತೆ. ಅವರಿಗೆ ಮ್ಯಾಚ್ ಆಗುವ ಡಿಎನ್ಎ ರಾಷ್ಟ್ರವಾದ. ಕಾಂಗ್ರೆಸ್ ಡಿಎನ್ಎ ಅವರಿಗೆ ಮ್ಯಾಚ್ ಆಗಲ್ಲ. ಮ್ಯಾಚ್ ಆಗದ ಡಿಎನ್ಎ ಜೊತೆ ಬಹಳ ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular