HomeLatest Newsಎದೆ ಸೀಳಿದರೆ ಮೂರಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ? ವಿವಾದ ಸೃಷ್ಟಿಸಿದ ಸಿ.ಟಿ.ರವಿ...

ಎದೆ ಸೀಳಿದರೆ ಮೂರಕ್ಷರ ಇಲ್ಲದ ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ? ವಿವಾದ ಸೃಷ್ಟಿಸಿದ ಸಿ.ಟಿ.ರವಿ ಹೇಳಿಕೆ

ಚಿಕ್ಕಮಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ವಿಧಾನ ಪರಿಷತ್​​ ಬಿಜೆಪಿ ಸದಸ್ಯ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿ.ಟಿ.ರವಿ, ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ, ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ. ಆತ ಬಂದು ನೀಟ್ ವಿರುದ್ದ ಹೋರಾಟ ಮಾಡುತ್ತಿದ್ದಾನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಂದ ಮುಲ್ಲಾ ಗಳು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳ್ತಾರೆ, ಮೋದಿ ಹಠಾವೋ ಅಂತಾರೆ. ಸಿಎಎಗೂ, ಎನ್​​ಆರ್​​ಸಿಗೂಗೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಏನು ಸಂಬಂಧ? ಭಾರತವನ್ನ ತುಂಡರಿಸಬೇಕು ಎಂದು ಹೇಳಿದ ತುಕಡೆ ಗ್ಯಾಂಗ್​​ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ಮೋದಿಯವರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೊಬ್ಬ ದೇಶಭಕ್ತ ಪ್ತಧಾನ ಮಂತ್ರಿ ಭಾರತ ಮಾತಾಕಿ ಜೈ ಎಂಬ ಘೋಷಣೆಯನ್ನು ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಉದ್ದಗಲಕ್ಕೂ ಹರಡಿದವರು. ಪ್ರಧಾನಿ ಮೋದಿ ಬಗ್ಗೆ ಎಲ್ಲೆಡೆ ಜನರು ಅಭಿಮಾನ ವ್ಯಕ್ತಪಡಿಸುತ್ತಾರೆ. ರಾಹುಲ್ ಗಾಂಧಿ ಅವರ ಸರ್ಟಿಫಿಕೇಟ್ ಪ್ರಧಾನಿ ಮೋದಿ ಅವರಿಗೆ ಅವಶ್ಯಕತೆಯಿಲ್ಲ. ಅವರ ಬೆಂಬಲದ ಅಗತ್ಯವೂ ಮೋದಿಯವರಿಗಿಲ್ಲ. ದೇಶದ ಜನ ಮೂರನೇ ಬಾರಿ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿರಿವುದೇ ದೇಶದ ಜನ ಮೋದಿ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೊಟ್ಟ ಸರ್ಟಿಫಿಕೆಟ್ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular