ತಂತ್ರಜ್ಞಾನದ ಯುಗದಲ್ಲಿ ಇಂದು ಬಹುತೇಕ ಎಲ್ಲ ಕೆಲಸಗಳೂ ಮೊಬೈಲ್ನಲ್ಲೇ ಸುಲಭವಾಗಿ ಮುಗಿಯುತ್ತಿವೆ. ಕೈಯಲ್ಲಿ ಒಂದು ಸ್ಮಾರ್ಟ್ಫೋನ್ ಇದ್ದರೆ ಸಾಕು, ಕೆಲವೇ ನಿಮಿಷಗಳಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಲಭ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಟ್ಸಾಪ್ ಆಧಾರಿತ ಸೇವೆಗಳನ್ನು ವ್ಯಾಪಕವಾಗಿ ಪರಿಚಯಿಸುತ್ತಿವೆ. ಇದರಿಂದ ಸರ್ಕಾರಿ ಸೇವೆಗಳು ಮತ್ತಷ್ಟು ವೇಗವಾಗಿ ಮತ್ತು ಸುಲಭವಾಗಿ ಜನರಿಗೆ ತಲುಪುತ್ತಿವೆ.
ಸ್ಮಾರ್ಟ್ಫೋನ್ ಹೊಂದಿರುವ ಪ್ರತಿಯೊಬ್ಬರ ಫೋನ್ನಲ್ಲೂ ವಾಟ್ಸಾಪ್ ಅನಿವಾರ್ಯ ಅಪ್ಲಿಕೇಶನ್ ಆಗಿದೆ. ಬೆಳಿಗ್ಗೆಯಿಂದ ರಾತ್ರಿ ತನಕ ಸ್ನೇಹಿತರು, ಕುಟುಂಬದವರು, ಕಚೇರಿ ಕೆಲಸಗಳು ಹಾಗೂ ವ್ಯವಹಾರಕ್ಕಾಗಿ ವಾಟ್ಸಾಪ್ ಬಳಸಲಾಗುತ್ತದೆ. ಜನಪ್ರಿಯತೆಯನ್ನು ಗಮನಿಸಿದ ಸರ್ಕಾರಗಳು ಮತ್ತು ಹಲವು ಸಂಸ್ಥೆಗಳು ಸಾರ್ವಜನಿಕ ಸೇವೆಗಳನ್ನು ವಾಟ್ಸಾಪ್ ಮೂಲಕವೇ ಒದಗಿಸಲು ಮುಂದಾಗಿವೆ. ಇದರಿಂದ ಅಗತ್ಯ ದಾಖಲೆಗಳು, ಪ್ರಮಾಣಪತ್ರಗಳು ಹಾಗೂ ಇತರೆ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.
ವಾಟ್ಸಾಪ್ ಮೂಲಕ ಗುರುತಿನ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಬಹುದು
ಕೇಂದ್ರ ಸರ್ಕಾರವು MyGov Helpdesk ಮೂಲಕ ವಾಟ್ಸಾಪ್ ಸೇವೆಯನ್ನು ಆರಂಭಿಸಿದೆ. ಇದರ ಮೂಲಕ ಗುರುತಿನ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಇತರೆ ದಾಖಲೆಗಳನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಬಹುದು.
ಇದಕ್ಕಾಗಿ 90131 51515 ಸಂಖ್ಯೆಯನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು “Hi” ಎಂದು ಸಂದೇಶ ಕಳುಹಿಸಬೇಕು. ನಂತರ ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ (Driving Licence), 10ನೇ ತರಗತಿ, ಪಿಯುಸಿ/ಇಂಟರ್ ಸೇರಿದಂತೆ ವಿವಿಧ ಪ್ರಮಾಣಪತ್ರಗಳನ್ನು ಪಡೆಯಬಹುದು.
ವಾಟ್ಸಾಪ್ ಮೂಲಕ ರೈಲಿನಲ್ಲೇ ಆಹಾರ ಆರ್ಡರ್ ಮಾಡಿ
ಭಾರತೀಯ ರೈಲ್ವೆ ಹಾಗೂ ಜಿಯೋಮಾರ್ಟ್ ಸಹಭಾಗಿತ್ವದಲ್ಲಿ ರೈಲು ಪ್ರಯಾಣಿಕರಿಗೆ ವಾಟ್ಸಾಪ್ ಮೂಲಕ ಆಹಾರ ಸೇವೆ ಒದಗಿಸಲಾಗುತ್ತಿದೆ.
- 70420 62070 ಸಂಖ್ಯೆಗೆ “Hi” ಎಂದು ಸಂದೇಶ ಕಳುಹಿಸಿ, ನಿಮ್ಮ PNR ಸಂಖ್ಯೆಯನ್ನು ಕಳುಹಿಸಿದರೆ ಆಹಾರವನ್ನು ನಿಮ್ಮ ಸೀಟಿನ ಬಳಿಗೆ ತಂದು ನೀಡಲಾಗುತ್ತದೆ.
- ಪ್ರಯಾಣದ ವೇಳೆ ದಿನಸಿ ಸಾಮಗ್ರಿ ಅಥವಾ ಇತರೆ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಲು 88811 99119 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು.
ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು 90226 90226 ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ:
- ಬ್ಯಾಂಕ್ ಖಾತೆಯ ಬ್ಯಾಲೆನ್ಸ್
- ಮಿನಿ ಸ್ಟೇಟ್ಮೆಂಟ್
- ಪಿಂಚಣಿ ಸ್ಲಿಪ್
ಮಾಹಿತಿಯನ್ನು ಪಡೆಯಬಹುದು.
ICICI ಬ್ಯಾಂಕ್ ಗ್ರಾಹಕರು 86400 86400 ಸಂಖ್ಯೆಯ ಮೂಲಕ:
- ಖಾತೆಯ ಬ್ಯಾಲೆನ್ಸ್
- ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕ್ ಅಥವಾ ಅನ್ಬ್ಲಾಕ್
- ಫಿಕ್ಸ್ಡ್ ಡೆಪಾಸಿಟ್ (FD) ಸಂಬಂಧಿತ ಸೇವೆಗಳು
ಪಡೆಯಬಹುದು.
ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್
ಮೊಬೈಲ್ನಲ್ಲೇ ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.
- Indane Gas: 75888 88824
- HP Gas: 92222 01122
- Bharat Gas: 18002 24344
ಈ ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು.

