HomeLatest Newsಜೆಡಿಎಸ್ ಟೀಕಿಸುವ ಸಿಎಂ ಸಿದ್ದರಾಮಯ್ಯ ಪ್ರಾದೇಶಿಕ ಪಕ್ಷ ಕಟ್ಟಿ ಚುನಾವಣೆ ಗೆದ್ದು ತೋರಿಸಲಿ: ಹೆಚ್.ಡಿ.ಕುಮಾರಸ್ವಾಮಿ ಸವಾಲು

ಜೆಡಿಎಸ್ ಟೀಕಿಸುವ ಸಿಎಂ ಸಿದ್ದರಾಮಯ್ಯ ಪ್ರಾದೇಶಿಕ ಪಕ್ಷ ಕಟ್ಟಿ ಚುನಾವಣೆ ಗೆದ್ದು ತೋರಿಸಲಿ: ಹೆಚ್.ಡಿ.ಕುಮಾರಸ್ವಾಮಿ ಸವಾಲು

ದಾವಣಗೆರೆ: ಉಪಚುನಾವಣಾ ಅಖಾಡ ರಂಗೇರಿದೆ. ರಾಅಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದೇ ವೇಳೆ ಆರೋಪ-ಪ್ರತ್ಯಾರೋಪ ವಾಗ್ದಾಳಿಗಳು ಜೋರಾಗಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್​​ ಬಗ್ಗೆ ಟೀಕಿಸುವ ಸಿಎಂ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿ ಚುನಾವಣೆಗೆ ಸ್ಫರ್ಧಿಸಲಿ. ಆಗ ಅವರು ಎಷ್ಟು ಕ್ಷೇತ್ರ ಗೆಲ್ಲುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಹೆಚ್​​.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕುಟುಂಬ ರಾಜಕಾರಣದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ತಮ್ಮ ಕುಟುಂಬದ ರಾಜಕೀಯ ಪ್ರವೇಶವು ಜನರ ಬೆಂಬಲದಿಂದ ಆದದ್ದು, ಆದರೆ ಸಿದ್ದರಾಮಯ್ಯರ ಮಗನ ರಾಜಕೀಯ ಪ್ರವೇಶವು ರಾಜ್ಯದ ಉದ್ದಾರಕ್ಕಲ್ಲ, ಬದಲಿಗೆ ವಸೂಲಿಗಾಗಿ ಎಂದು ಆರೋಪಿಸಿದರು.

ಜೆಡಿಎಸ್ 40 ಸೀಟುಗಳನ್ನು ಗೆದ್ದಿದ್ದು ಸ್ವಂತ ಶಕ್ತಿಯಿಂದ. 130-140 ಸೀಟು ಗೆದ್ದಿದ್ದೀವಿ ಎಂಬ ಅಹಂಕಾರ ಶಾಶ್ವತವಲ್ಲ. ತಮಿಳುನಾಡಲ್ಲಿ ಡಿಎಂಕೆ ಬಳಿಯಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್​ 28 ಸೀಟುಗಳನ್ನು ಪಡೆದಿದ್ದು, ಆ ಪೈಕಿ ಕೆಲ ಕ್ಷೇತ್ರಗಳಿಗೂ ಅಭ್ಯರ್ಥಿಗಳಿಲ್ಲದೆ ಬೀದಿಯಲ್ಲಿ ಹೋಗುವವರನ್ನು ತಂದು ನಿಲ್ಲಿಸಿದ್ದಾರೆ ಎಂದು ಹೆಚ್​​ಡಿಕೆ ವ್ಯಂಗ್ಯವಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular