ಲಾಸ್ ಏಂಜಲೀಸ್: ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಸೃಷ್ಟಿಸಿದವರು ನೀಲ್ ಆರ್ಮ್‌ಸ್ಟ್ರಾಂಗ್. ಎರಡನೆಯ ಗಗನಯಾತ್ರಿ ಬಜ್ ಆಲ್ಡ್ರಿನ್. ಅವರಿಗೆ ಈಗ 93ನೇ ಹುಟ್ಟುಹಬ್ಬದ ಸಂಭ್ರಮ.
ಈ ಸಂಭ್ರಮವನ್ನು ಅವರು ಮದುವೆಯಾಗುವ ಮೂಲಕ ಇಮ್ಮಡಿಗೊಳಿಸಿದ್ದಾರೆ. ಆಂಕಾ ಫೌರ್ ಎನ್ನುವವರ ಜೊತೆ ಬಜ್ ಈಗ ವಿವಾಹವಾಗಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಪೋಲೊ-11 ಮಿಷನ್ ಗಗನಯಾನದಲ್ಲಿ ಜಗತ್ತಿನ ಇತಿಹಾಸದಲ್ಲೇ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ಮೂವರು ಗಗನಯಾನಿಗಳ ಪೈಕಿ ಈಗ ಉಳಿದಿರುವ ಏಕೈಕ ಸದಸ್ಯರಾಗಿದ್ದಾರೆ ಆಲ್ಡ್ರಿನ್.
ಪತ್ನಿ ಡಾ. ಅಂಕಾ ಫೌರ್ ಅವರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದಾರೆ. “ನನ್ನ 93ನೇ ಹುಟ್ಟುಹಬ್ಬದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನಾನು ಗೌರವಿಸಲ್ಪಟ್ಟ ದಿನದಂದು ಬಹುಕಾಲದ ಪ್ರೀತಿ ಡಾ. ಆಂಕಾ ಫೌರ್ ಜೊತೆ ವಿವಾಹವಾಗಿದ್ದೇನೆ ಎಂದು ಘೋಷಿಸಿದ್ದಾರೆ.
ಆಲ್ಡ್ರಿನ್ ಅವರಿಗೆ ಇದು ನಾಲ್ಕನೇ ವಿವಾಹ. ಇವರು 1971 ರಲ್ಲಿ ನಾಸಾದಿಂದ ನಿವೃತ್ತರಾದರು. 1998 ರಲ್ಲಿ ಸಿಬ್ಬಂದಿ ಬಾಹ್ಯಾಕಾಶ ಪರಿಶೋಧನೆಯ ವಿಸ್ತರಣೆಯನ್ನು ಉತ್ತೇಜಿಸಲು ಲಾಭರಹಿತ ಸಂಸ್ಥೆಯಾದ ಶೇರ್‌ಸ್ಪೇಸ್ ಫೌಂಡೇಶನ್ ಶುರು ಮಾಡಿದ್ದಾರೆ.
https://twitter.com/TheRealBuzz/status/1616600085441159168?ref_src=twsrc%5Etfw%7Ctwcamp%5Etweetembed%7Ctwterm%5E1616600085441159168%7Ctwgr%5E7c6c7bf0d393df9b7f590aaf6d70a2bb92b5b6cf%7Ctwcon%5Es1_&ref_url=https%3A%2F%2Fwww.news18.com%2Fbuzz%2Fbuzz-aldrin-gets-married-on-93rd-birthday-twitter-is-over-the-moon-for-happy-couple-6883513.html
https://twitter.com/TheRealBuzz/status/1616600085441159168?ref_src=twsrc%5Etfw%7Ctwcamp%5Etweetembed%7Ctwterm%5E1616600
https://twitter.com/TheRealBuzz/status/1616600085441159168?ref_src=twsrc%5Etfw%7Ctwcamp%5Etweetembed%7Ctwterm%5E1616602494435721216%7Ctwgr%5E7c6c7bf0d393df9b7f590aaf6d70a2bb92b5b6cf%7Ctwcon%5Es2_&ref_url=https%3A%2F%2Fwww.news18.com%2Fbuzz%2Fbuzz-aldrin-gets-married-on-93rd-birthday-twitter-is-over-the-moon-for-happy-couple-6883513.html