HomeSpecialಟಾಯ್ಲೆಟ್ ಪೇಪರ್ ಬಿಳಿ ಬಣ್ಣದಲ್ಲಿಯೇ ಏಕಿರುತ್ತದೆ....? ಇದರ ಹಿಂದಿದೆ ಅಚ್ಚರಿಯ ಸಂಗತಿ.....!

ಟಾಯ್ಲೆಟ್ ಪೇಪರ್ ಬಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದರ ಹಿಂದಿದೆ ಅಚ್ಚರಿಯ ಸಂಗತಿ…..!

ವಾಶ್ ರೂಂನಲ್ಲಿ ಬಳಸುವ ಟಾಯ್ಲೆಟ್ ಪೇಪರ್ ಅನ್ನು ಸೆಲ್ಯುಲೋಸ್ ಫೈಬರ್‌ನಿಂದ ತಯಾರಿಸಲಾಗುತ್ತದೆ. ಮರ ಅಥವಾ ಕಾಗದಗಳನ್ನು ಮರುಬಳಕೆ ಮಾಡಿ ಇವುಗಳನ್ನು ಉತ್ಪಾದಿಸಲಾಗುತ್ತಿದ್ದು, ಇವು ಬಿಳಿ ಬಣ್ಣದಲ್ಲಿರುತ್ತವೆ. ಟಾಯ್ಲೆಟ್ ಪೇಪರ್ ಹಾಗೂ ಟಿಶ್ಯೂ ಪೇಪರ್‌ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿಯೇ ಇರುತ್ತದೆ. ಆದರೆ ಇದ್ಯಾಕೆ ಬಿಳಿ ಬಣ್ಣದಲ್ಲಿಯೇ ಇರುತ್ತದೆ ಅನ್ನೋದು ಕುತೂಹಲದ ಸಂಗತಿ.

ವಾಸ್ತವವಾಗಿ ಟಾಯ್ಲೆಟ್ ಪೇಪರ್ ತಯಾರಿಸಲಾದ ಫೈಬರ್ ಪ್ರಕೃತಿಯಲ್ಲಿ ಬಿಳಿಯಾಗಿರುತ್ತದೆ. ಅದರ ತಯಾರಿಕೆಯ ಪ್ರಕ್ರಿಯೆಯಲ್ಲಿ ಬ್ಲೀಚ್ ಅನ್ನು ಬಳಸಿದಾಗ, ಕೊಳಕು ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಈ ರೀತಿಯಾಗಿ ಅದು ಹೆಚ್ಚು ಬಿಳಿಯಾಗುತ್ತದೆ. ಇದನ್ನು ಹಳೆಯ ಮತ್ತು ಬೇಡದ ತ್ಯಾಜ್ಯ ಕಾಗದಗಳಿಂದಲೂ ತಯಾರಿಸಲಾಗುತ್ತದೆ. ಟಾಯ್ಲೆಟ್‌ ಪೇಪರ್‌ಗಳನ್ನು ಕಲರ್ ಫುಲ್ ಮಾಡಿದರೆ ಬಳಸುವಾಗ ಬಣ್ಣ ಬಿಡಬಹುದು ಅನ್ನೋ ಕಾರಣಕ್ಕೆ ಬಿಳಿ ಬಣ್ಣದಲ್ಲಿಯೇ ಇಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಣ್ಣದ ಟಾಯ್ಲೆಟ್ ಪೇಪರ್ ಆರೋಗ್ಯಕ್ಕೆ ಒಳ್ಳೆಯದಲ್ಲ. ವೈದ್ಯರು ಕೂಡ ಬಿಳಿ ಟಾಯ್ಲೆಟ್ ಪೇಪರ್ ಅನ್ನು ಬಳಸಲು ಶಿಫಾರಸು ಮಾಡುತ್ತಾರೆ. ಬಿಳಿ ಕಾಗದ ಪರಿಸರ ಸ್ನೇಹಿಯೂ ಹೌದು. ಮಣ್ಣಿನಲ್ಲಿ ಬಹುಬೇಗ ಕೊಳೆಯುತ್ತದೆ. ಹಾಗಾಗಿ ಬಹುತೇಕ ಎಲ್ಲಾ ಕಡೆಗಳಲ್ಲಿ ಬಿಳಿಯ ಟಾಯ್ಲೆಟ್‌ ಪೇಪರ್‌ಗಳನ್ನೇ ಬಳಸಲಾಗುತ್ತದೆ. ಬಹಳ ಹಿಂದೆ ಶೌಚಾಲಯಗಳಲ್ಲಿ ಬಣ್ಣದ ಕಾಗದವನ್ನು ಬಳಸಲಾಗುತ್ತಿತ್ತು.

For Latest News Updates, Join Our Whatsapp Community🚩
RELATED ARTICLES

Most Popular