HomeKarnatakaಅಪಘಾತದ ಪರಿಹಾರ ಹಣ ಬಾಕಿ: ಬೆಂಗಳೂರಿನಿಂದ ಶೃಂಗೇರಿಗೆ ಹೊರಟಿದ್ದ 2 ಸರ್ಕಾರಿ ಬಸ್ ಗಳನ್ನು ಸೀಜ್...

ಅಪಘಾತದ ಪರಿಹಾರ ಹಣ ಬಾಕಿ: ಬೆಂಗಳೂರಿನಿಂದ ಶೃಂಗೇರಿಗೆ ಹೊರಟಿದ್ದ 2 ಸರ್ಕಾರಿ ಬಸ್ ಗಳನ್ನು ಸೀಜ್ ಮಾಡಿದ ಅಧಿಕಾರಿಗಳು

ಬೆಂಗಳೂರು: ಬೆಂಗಳೂರಿನಿಂದ ಚಿಕ್ಕಮಗಳುರು ಜಿಲ್ಲೆಯ ಶೃಂಗೇರಿಗೆ ತೆರಳುತ್ತಿದ್ದ ಎರಡು ಸರ್ಕಾರಿ ಬಸ್ ಗಳನ್ನು ಹಾಸನದಲ್ಲಿ ಸೀಜ್ ಮಾಡಿರುವ ಘಟನೆ ನಡೆದಿದೆ.

ಚಿಕ್ಕಮಗಳುರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್ ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಳಿ ಸೀಜ್ ಮಾಡಲಾಗಿದೆ.

ಅಪಘಾತದ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ವಕೀಲರ ತಂಡ ಬಸ್ ಗಳನ್ನು ಸೀಜ್ ಮಾಡಿದೆ. ಬಸ್ ಸೀಜ್ ಮಾಡಿ ಚನ್ನರಾಯಪಟ್ಟಣದ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್ ಸೀಜ್ ಮಾಡುತ್ತಿದ್ದಂತೆಯೇ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಮಾರ್ಗ ಮಧ್ಯೆಯೇ ಇಳಿದುಕೊಳ್ಳಲು ಸೂಚಿಸಲಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡೂ ಬಸ್ ಗಳು ಬೆಂಗಳೂರಿನಿಂದ ಶೃಂಗೇರಿಗೆ ಹೊರಟಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಬಸ್ ಗಳನ್ನು ಸೀಜ್ ಮಾಡಲಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular