HomeKarnatakaBIG NEWS: ಉದ್ಯಮಿಗೆ ಹನಿಟ್ರ್ಯಾಪ್; ಪತ್ನಿಯನ್ನು ವಿಧವೆ ಎಂದು ಪರಿಚಯಿಸಿದ್ದ ಪತಿ ಮಹಾಶಯ; ದಂಪತಿ ಸೇರಿ...

BIG NEWS: ಉದ್ಯಮಿಗೆ ಹನಿಟ್ರ್ಯಾಪ್; ಪತ್ನಿಯನ್ನು ವಿಧವೆ ಎಂದು ಪರಿಚಯಿಸಿದ್ದ ಪತಿ ಮಹಾಶಯ; ದಂಪತಿ ಸೇರಿ ನಾಲ್ವರು ಅರೆಸ್ಟ್

ಬೆಂಗಳೂರು: ಉದ್ಯಮಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಅತಿವುಲ್ಲಾ ಎಂಬುವವರನ್ನು ಹನಿಟ್ರ್ಯಾಪ್ ಮಾಡಿ ಆರೋಪಿಗಳು ಹಣ ದೋಚಿದ್ದರು. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಖಲೀಮ್, ಸಭಾ, ಓಬೆದ್ ರಕಿಂ, ಅತೀಕ್ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತ ಆರೋಪಿಗಳಲ್ಲಿ ಖಲೀಮ್ ಹಾಗೂ ಸಭಾ ಇಬ್ಬರೂ ಗಂಡ-ಹೆಂಡತಿ. ಪತ್ನಿ ಸಭಾಳನ್ನು ವಿಧವೆ ಎಂದು ಉದ್ಯಮಿಗೆ ಪರಿಚಯ ಮಾಡಿಸಿಕೊಟ್ಟಿದ್ದ. ಬಳಿಕ ಆರ್.ಅರ್.ನಗರದಲ್ಲಿ ರೂಮ್ ಬುಕ್ ಮಾಡಲು ಉದ್ಯಮಿಯನ್ನು ಸಭಾ ಕರೆದಿದ್ದಳು. ಆಧಾರ್ ಕಾರ್ಡ್ ಜೊತೆ ಬರುವಂತೆ ಅತಿವುಲ್ಲಾಗೆ ತಿಳಿಸಿದ್ದಳು. ರೂಮ್ ಬುಕ್ ಮಾಡಿದ ಕೆಲ ಹೊತ್ತಲ್ಲೇ ಇತರ ಆರೋಪಿಗಳು ಎಂಟ್ರಿ ಕೊಟ್ಟಿದ್ದರು.

ಏಕಾಏಕಿ ಎಂಟ್ರಿಕೊಟ್ಟು ಸೀನ್ ಕ್ರಿಯೇಟ್ ಮಾಡಿ ಈ ವಿಚಾರ ನಿಮ್ಮ ಮನೆಯವರಿಗೆ ಹೇಳ್ತೀವಿ ಎಂದು 6 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ವೇಳೆ ಮಾಹಿತಿ ಪಡೆದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ವೇಳೆ ರೆಡ್ ಹ್ಯಾಂಡ್ ಆಗಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular