HomeKarnatakaSHOCKING NEWS: ತನ್ನದೇ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಬಸ್ ಮಾಲೀಕ

SHOCKING NEWS: ತನ್ನದೇ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಬಸ್ ಮಾಲೀಕ

ಉಡುಪಿ: ಬಸ್ ಮಾಲೀಕರೊಬ್ಬರು ತನ್ನದೇ ಬಸ್ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ್ ವ್ಯಾಪ್ತಿಯಲ್ಲಿ ನಡೆದಿದೆ.

ದಯಾನಂದ ಸೆಟ್ಟಿ ಮೃತ ದುರ್ದೈವಿ. ದಯಾನಂದ ಶೆಟ್ಟಿ ಬಸ್ ಮಾಲೀಕರಾಗಿದ್ದು, ಬಸ್ ಕೆಟ್ಟಿದ್ದರಿಂದ ರಿಪೇರಿಗಾಗಿ ಗ್ಯಾರೇಜ್ ಗೆ ಕೊಂಡೊಯ್ದಿದ್ದರು. ಈ ವೇಳೆ ಬಸ್ ದುರಸ್ತಿಯಾಗಿದೆಯೇ ಎಂದು ವಿಚಾರಿಸಲು ಸ್ವತ: ಗ್ಯಾರೇಜ್ ಗೆ ತೆರಳಿದ್ದ ಅವರು, ಬಸ್ ಮುಂಭಾಗ ನಿಂತಿದ್ದರು. ಇದೇ ಸಂದರ್ಭದಲ್ಲಿ ಬಸ್ ಮೆಕ್ಯಾನಿಕ್ ಎಂಜಿನ್ ಸ್ಟಾರ್ಟ್ ಮಾಡಿದ್ದಾನೆ ತಕ್ಷಣ ಬಸ್ ಮುಂದಕ್ಕೆ ಚಲಿಸಿದೆ.

ಬಸ್ ಮುಂಭಾಗದಲ್ಲಿ ನಿಂತಿದ್ದ ದಯಾನಂದ ಶೆಟ್ಟಿ ಕೆಳಗೆಬಿದ್ದು ಬಸ್ ಚಕ್ರದಡಿ ಸಿಲುಕಿ ಗಂಭಿರವಾಗಿ ಗಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular