HomeKarnatakaBREAKING NEWS: ಕುರಿಗಾಹಿ ಮೇಲೆ ಹರಿದ ಸರ್ಕಾರಿ ಬಸ್; ಕುರಿಗಾಹಿ ಹಾಗೂ 20 ಕುರಿಗಳು ಸ್ಥಳದಲ್ಲೇ...

BREAKING NEWS: ಕುರಿಗಾಹಿ ಮೇಲೆ ಹರಿದ ಸರ್ಕಾರಿ ಬಸ್; ಕುರಿಗಾಹಿ ಹಾಗೂ 20 ಕುರಿಗಳು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೆಳ್ಳಂ ಬೆಳಿಗ್ಗೆ ಮತ್ತೊಂದು ಭೀಕರ ಅಪಘಾತ ಸಂಭವಿಸುಇದ್ದು, ಕುರಿ ಹಿಂಡಿನೊಂದಿಗೆ ತೆರಳುತ್ತಿದ್ದ ಕುರಿಗಾಹಿ ಮೇಲೆಯೇ ಸರ್ಕಾರಿ ಬಸ್ ಹರಿದಿದ್ದು, ಕುರಿಗಾಹಿ ಹಾಗೂ 20 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಕುರಿಮೇಯಿಸಲೆಂದು ತೆರಳುತ್ತಿದ್ದ ವೇಳೆ ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿಯಲ್ಲಿ ಈ ದುರಂತ ಸಂಭವಿಸಿದೆ. ನೆಲಗೇತನಹಟ್ಟಿಯ ಕುರಿಗಾಹಿ ರಾಜಪ್ಪ (30) ಮೃತ ಕುರಿಗಾಹಿ.

ಅಪಘಾತದಲ್ಲಿ ರಾಜಪ್ಪಗೆ ಸೇರಿದ 20 ಕುರಿಗಳು ಸಾವನ್ನಪ್ಪಿವೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular