HomeLatest Newsಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಬುಲೆಟ್; ಅದೃಷ್ಟವಶಾತ್ ಬೈಕ್ ಸವಾರ ಪಾರು | Watch

ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಬುಲೆಟ್; ಅದೃಷ್ಟವಶಾತ್ ಬೈಕ್ ಸವಾರ ಪಾರು | Watch

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಸ್ಟಾರ್ಟ್ ಮಾಡುವ ವೇಳೆ ದಿಢೀರನೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಈ ಅನಿರೀಕ್ಷಿತ ಘಟನೆಯಲ್ಲಿ ಬುಲೆಟ್ ಮಾತ್ರವಲ್ಲದೆ, ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೂ ವ್ಯಾಪಕ ಹಾನಿಯಾಗಿದ್ದು, ಎರಡೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಬೈಕ್ ಸವಾರ ಆಸಿಫ್ ಖಾನ್‌ಗೆ ಯಾವುದೇ ಅಪಾಯವಾಗಿಲ್ಲ.

ಘಟನೆ ನಡೆದಿದ್ದು ಕೋತವಾಲಿ ಪ್ರದೇಶದಲ್ಲಿನ ಜಿಲ್ಲಾ ಆಸ್ಪತ್ರೆ ಸಮೀಪದ ಮೊಬೈಲ್ ಅಂಗಡಿಯ ಮುಂದೆ. ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಬುಲೆಟ್ ಬೈಕ್ ಸುಮಾರು ಅರ್ಧ ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಬೈಕ್‌ನ ಮಾಲೀಕ ಆಸಿಫ್ ಖಾನ್ ಪಕ್ಕದ ಅಂಗಡಿಗೆ ಹೋಗಿ ಹಿಂದಿರುಗಿದ್ದರು. ಅವರು ಬೈಕ್ ಸ್ಟಾರ್ಟ್ ಮಾಡಲು ಕೀ ತಿರುಗಿಸುತ್ತಿದ್ದಂತೆ ದೊಡ್ಡ ಶಬ್ದದೊಂದಿಗೆ ಇಂಜಿನ್‌ನಿಂದ ಬೆಂಕಿ ಜ್ವಾಲೆಗಳು ಚಿಮ್ಮಿದವು. ತಕ್ಷಣವೇ ಆಸಿಫ್ ಖಾನ್ ಸುಟ್ಟು ಉರಿಯುತ್ತಿದ್ದ ಬೈಕ್‌ನಿಂದ ದೂರ ಸರಿದು ಪ್ರಾಣಾಪಾಯದಿಂದ ಪಾರಾದರು.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನಿಯಂತ್ರಣ ಕಳೆದುಕೊಂಡ ಬೈಕ್ ಉರಿಯುತ್ತಲೇ ಪಕ್ಕದಲ್ಲಿ ನಿಲ್ಲಿಸಿದ್ದ ಇಕ್ರಾರ್ ಹುಸೇನ್‌ಗೆ ಸೇರಿದ ಸ್ಕೂಟರ್ ಮೇಲೆ ಬಿದ್ದಿತು. ಪರಿಣಾಮ ಸ್ಕೂಟರ್ ಕೂಡ ಬೆಂಕಿಗೆ ಆಹುತಿಯಾಯಿತು. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಅವರ ಪ್ರಯತ್ನ ವಿಫಲವಾಯಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ಎರಡೂ ವಾಹನಗಳು ಬಹುತೇಕ ನಾಶವಾಗಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯಿಂದ ಆಸಿಫ್ ಖಾನ್ ಮತ್ತು ಇಕ್ರಾರ್ ಹುಸೇನ್ ಇಬ್ಬರಿಗೂ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಅದರಲ್ಲೂ ಹುಸೇನ್ ಅವರ ಹೊಸ ಸ್ಕೂಟರ್ ಸಂಪೂರ್ಣವಾಗಿ ನಾಶವಾಗಿದೆ. ಅದೃಷ್ಟವಶಾತ್, ವಾಹನ ಮಾಲೀಕರು ಬೆಂಕಿಯಿಂದ ದೂರ ಉಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular