HomeUncategorizedವಿಧಾನಸಭೆಯಲ್ಲಿಯೂ ಪ್ರತಿದ್ವನಿಸಿದ ಸಿಲಿಂಡರ್ ಕೊರತೆ ಸಮಸ್ಯೆ: ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಗದ್ದಲ- ಕೋಲಾಹಲ

ವಿಧಾನಸಭೆಯಲ್ಲಿಯೂ ಪ್ರತಿದ್ವನಿಸಿದ ಸಿಲಿಂಡರ್ ಕೊರತೆ ಸಮಸ್ಯೆ: ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಗದ್ದಲ- ಕೋಲಾಹಲ

ಬೆಂಗಳೂರು: ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಕ್ಕಷ್ಟು ಎದುರಾಗಿದ್ದು, ಯುದ್ಧದ ಪರಿಣಾಮ ಕರ್ನಾಟಕದಲ್ಲಿ ಸಿಲಿಂಡರ್ ಕೊರತೆ ಎದುರಾಗಿದೆ.
ಹೋಟೆಲ್ ಉದ್ಯಮ ಮತ್ತು ಜನಸಾಮಾನ್ಯರು ಎಲ್ ಪಿಜಿ ಸಿಲಿಂಡರ್ ಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವಿಚಾರ ವಿಧಾನ ಮಂಡಲ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದೆ.

ವಿಧಾನಸಭೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ವಿಚಾರ ಗದ್ದಲಕ್ಕೆ ಕಾರಣವಾಗಿದೆ. ಶೂನ್ಯವೇಳೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ಕೋಲಾಹಲ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಲಿಂಡರ್​ ಕೊರತೆ ಬಗ್ಗೆ ವಿಧಾನಸಭೆಯಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ವಿಷಯ ಪ್ರಸ್ತಾಪ ಮಾಡಿದ್ದು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಆಹಾರ ಸಚಿವರಿಂದ ಉತ್ತರ ಕೊಡಿಸೋಣ ಎಂದು ಸ್ಪೀಕರ್​ ಯು.ಟಿ.ಖಾದರ್ ಹೇಳಿದರು. ಶಾಸಕರ ಪ್ರಸ್ತಾಪಕ್ಕೆ ಉತ್ತರಿಸಿದ ಆಹಾರ ಸಚಿವ ಮುನಿಯಪ್ಪ, ಇರಾನ್-ಇಸ್ರೇಲ್ ಯುದ್ಧದಿಂದ ಸಿಲಿಂಡರ್​ ಪೂರೈಕೆ ಆಗ್ತಿಲ್ಲ. ಆದರೆ ಗೃಹ ಬಳಕೆಯ ಸಿಲಿಂಡರ್​​ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

25 ದಿನಕ್ಕೊಮ್ಮೆ ಗೃಹ ಬಳಕೆಯ ಸಿಲಿಂಡರ್​ ಕೊಡುತ್ತೇವೆ. ಗ್ಯಾಸ್​ ಸಿಲಿಂಡರ್​​ಗೆ ಹೆಚ್ಚು ಖರ್ಚು ಮಾಡಿ ಸ್ಟೋರೇಜ್ ಮಾಡುವುದು ಬೇಡ ಎಂದಿದ್ದಾರೆ. ಈ ವೇಳೆ ಮುನಿಯಪ್ಪ ಮಾತಿಗೆ ರಂಗನಾಥ್ ಮರು ಪ್ರಶ್ನೆ ಮಾಡಿದ್ದು, 2000 ರೂ. ಕೊಟ್ಟು ವಾಣಿಜ್ಯ ಸಿಲಿಂಡರ್ ಪಡೆಯುವುದು ಹೇಗೆ? ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ ಎಂದಿದ್ದಾರೆ. ಈ ವೇಳೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಬೇಡಿ ಎಂದಿದ್ದಾರೆ. ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಸಮಸ್ಯೆ ಸರಿಪಡಿಸುವುದು ಯಾರು? ಬಿಜೆಪಿಯವರು ಯಾಕೆ ಮಾತನಾಡಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಮೋದಿ ಅಂದರೆ ಇವರಿಗೆಷ್ಟು ಭಯ ಎಂದು ಗೋಪಾಲಕೃಷ್ಣ ಹೇಳಿದ್ದು ಮತ್ತಷ್ಟು ವಾಗ್ವಾದಕ್ಕೆ ಕಾರಣವಾಯಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular