HomeKarnatakaಸಹೋದರರ ನಡುವೆ ಗಲಾಟೆ; ತಮ್ಮನನ್ನೇ ಕೊಂದ ಅಣ್ಣಂದಿರು; ಐವರು ಆರೋಪಿಗಳು ಅರೆಸ್ಟ್

ಸಹೋದರರ ನಡುವೆ ಗಲಾಟೆ; ತಮ್ಮನನ್ನೇ ಕೊಂದ ಅಣ್ಣಂದಿರು; ಐವರು ಆರೋಪಿಗಳು ಅರೆಸ್ಟ್

ರಾಯಚೂರು: ಜಮೀನು ವಿಚಾರವಾಗಿ ಸಹೋದರರ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲಿ ಅಂತ್ಯವಾಗಿದೆ. ಸಹೋದರರ ನಡುವೆ ಮಾರಾಮಾರಿ ನಡೆದು ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಿನೂರಿನಲ್ಲಿ ನಡೆದಿದೆ.

36 ವರ್ಷದ ರಾಮಣ್ಣ ಮೃತ ದುರ್ದೈವಿ. ಮೃತನ ಪತ್ನಿ ರತ್ನಮ್ಮ ಹಾಗೂ ಸಹೋದರಿ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

2 ಎಕರೆ 10 ಗುಂಟೆ ಜಾಗದ ವಿಚಾರವಾಗಿ ರಾಮಣ್ಣ ಹಾಗೂ ಆತನ ಅಣ್ಣಂದಿರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಇಬ್ಬರು ಅಣ್ಣಂದಿರು ಹಾಗೂ ಅವರ ಮಕ್ಕಳು ರಾಮಣ್ಣನ ಮೇಲೆ ಬಡಿಗೆಯಿಂದ ಮನಬಂದಂತೆ ಹೊಡೆದಿದ್ದಾರೆ. ತಪ್ಪಿಸಲು ಬಂದ ಪತ್ನಿ ಹಾಗೂ ಸಹೋದರಿ ಮೇಲೂ ಹಲ್ಲೆ ನಡೆಸಿದ್ದಾರೆ. ರಾಮಣ್ಣ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಮಾನ್ವಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular