HomeKarnatakaರಾಮ ಮಂದಿರಕ್ಕೆ ಭಕ್ತರು ಕೊಟ್ಟ ಇಟ್ಟಿಗೆ ಬಳಸಿಲ್ಲ, ಧಾರ್ಮಿಕ ಭಾವನೆಗೆ ಬಿಜೆಪಿಯಿಂದ ಧಕ್ಕೆ: ಆಯನೂರು ಆರೋಪ

ರಾಮ ಮಂದಿರಕ್ಕೆ ಭಕ್ತರು ಕೊಟ್ಟ ಇಟ್ಟಿಗೆ ಬಳಸಿಲ್ಲ, ಧಾರ್ಮಿಕ ಭಾವನೆಗೆ ಬಿಜೆಪಿಯಿಂದ ಧಕ್ಕೆ: ಆಯನೂರು ಆರೋಪ

ಶಿವಮೊಗ್ಗ: ಅಯೋಧ್ಯೆಯ ರಾಮ ಮಂದಿರದ ಕಟ್ಟಡವನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ದೇಶದ ರಾಮ ಭಕ್ತರು ಪೂಜೆ ಸಲ್ಲಿಸಿ ನೀಡಿದ ಇಟ್ಟಿಗೆ ಬಳಸಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ದೂರಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಮಳವಳ್ಳಿ ಅಗ್ರಹಾರ, ಮುಚಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಹಳ್ಳಿ(ಡೈರಿ ವೃತ್ತ)ದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಮ ಮಂದಿರ ನಿರ್ಮಾಣದ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ರಾಮ ಮಂದಿರ ಕಟ್ಟಡ ನಿರ್ಮಾಣಕ್ಕೆ 3800 ಕೋಟಿ ರೂ. ದೇಣಿಗೆ ಸಂಗ್ರಹದೊಂದಿಗೆ ಪ್ರತಿ ಹಳ್ಳಿಯ ಜನರಿಂದ ಇಟ್ಟಿಗೆ ಸಂಗ್ರಹಿಸಲಾಗಿದೆ. ಜನರು ಇಟ್ಟಿಗೆಗೆ ಪೂಜೆ ಸಲ್ಲಿಸಿ ಅಯೋಧ್ಯಗೆ ಕಳುಹಿಸಿಕೊಟ್ಟಿದ್ದರು. ಆದರೆ, ಕಟ್ಟಡ ನಿರ್ಮಾಣಕ್ಕೆ ಇಟ್ಟಿಗೆ ಬಳಕೆ ಆಗಿಲ್ಲ. ಇದರಿಂದ, ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದರು.

ಇಲ್ಲಿ ಚುನಾವಣೆಯ ಉದ್ದೇಶದಿಂದ ಅರೆ- ಬರೆಯಾಗಿ ರಾಮ ಮಂದಿರ ಉದ್ಘಾಟಿಸಲಾಗಿದೆ. ರಾಮ ಭಕ್ತರು ನೀಡಿದ ಇಟ್ಟಿಗೆ ಎಲ್ಲಿ ಹೋದವು. ಇದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಉತ್ತರಿಸಬೇಕು. ರಾಮ ಮಂದಿರ ನಿರ್ಮಾಣ ಜನರಿಂದ ಆಗಿದೆ. ಆದರೆ, ಬಿಜೆಪಿ ಹಾಗೂ ಸ್ಥಳೀಯ ಸಂಸದರು ರಾಮನ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಅರ್ಹತೆ ಕಳೆದುಕೊಂಡಿದ್ದಾರೆ ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬೂಟಾಟಿಕೆಗೆ ತಿರುಗೇಟು ನೀಡಬೇಕಿದೆ. ಅದೇ, ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ, ಹರಸಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಯಿಂದ ಅಶಕ್ತರು, ಕೂಲಿ- ಕಾರ್ಮಿಕರು ನೆರವು ಪಡೆದಿದ್ದಾರೆ. ಈ ಹಿಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ಜನಪರ ಆಡಳಿತ ನಡೆಸಿ, ಜನ ಸಾಮಾನ್ಯರ ಬದುಕಿಗೆ ದಾರಿ ದೀಪವಾಗಿದ್ದರು. ನಾನು ಅವರ ಮಗಳಾಗಿ ಅವರ ಹಾದಿಯಲ್ಲೇ ಸಾಗಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಅದೇ, ಕಾರಣಕ್ಕೆ ನನಗೆ ಮತ ನೀಡಿ ಹರಸಬೇಕು ಎಂದು ಕೋರಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಗೀತಾಗೆ ಹಣದ ಅವಶ್ಯಕತೆ ಇಲ್ಲ. ಆದರೆ, ಜನ ಸಾಮಾನ್ಯರ ಸೇವೆ ಮಾಡುವ ಕನಸು ಗೀತಾಳ ರಕ್ತದಲ್ಲಿಯೇ ಅಡಕವಾಗಿದೆ‌. ಆದ್ದರಿಂದ, ಚುನಾವಣೆ ಕಣಕ್ಕೆ ಧುಮುಕಿದ್ದಾರೆ‌. ಇಲ್ಲಿನ ಜನರ ಸೇವೆ ಮಾಡಲು ಗೀತಾಗೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು‌.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌಡ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ನಗರದ ಮಹದೇವಪ್ಪ ಮೊದಲಾದವರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular