ವರ್ಷದ ಅತ್ಯಂತ ರೋಮಾಂಚಕ ಹಬ್ಬಗಳಲ್ಲಿ ಒಂದಾದ ‘ಹ್ಯಾಲೋವೀನ್ 2026’ ಸಂಭ್ರಮಾಚರಣೆಯಲ್ಲಿ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬದೊಂದಿಗೆ ವಿಭಿನ್ನ ಹಾಗೂ ಆಕರ್ಷಕ ಅವತಾರಗಳಲ್ಲಿ ಮಿಂಚಿದ್ದಾರೆ. ಪತಿ ನಿಕ್ ಜೊನಾಸ್ ಮತ್ತು ಮಗಳಾದ ಮಾಲ್ತಿ ಮೇರಿ ಅವರೊಂದಿಗೆ ಇರುವ ಸುಂದರ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಾರಿಯ ಹ್ಯಾಲೋವೀನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪ್ರಸಿದ್ಧ ಮಾಡೆಲ್ ಕೈಲಿ ಜೆನ್ನರ್ ಅವರ ಐಕಾನಿಕ್ ‘ಕಿಂಗ್ ಕೈಲಿ’ ಲುಕ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಉದ್ದನೆಯ ಗಿಡಚೆಂಡಿನಂತಹ ಪ್ರಕಾಶಮಾನವಾದ ಗುಲಾಬಿ ಬಣ್ಣದ (ಪಿಂಕ್) ಕೂದಲು, ಕಪ್ಪು ಕ್ರಾಪ್ ಟಾಪ್, ಬ್ಲೇಜರ್, ಟ್ರೌಸರ್ಸ್ ಹಾಗೂ ದೊಡ್ಡ ಗ್ಲಾಸ್ ಧರಿಸಿ ನಟಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದೆಡೆ ಪ್ರಿಯಾಂಕಾ ಅವರ ಪತಿ ಹಾಗೂ ಗಾಯಕ ನಿಕ್ ಜೊನಾಸ್ ಕ್ಲಾಸಿಕ್ ಕೌಬಾಯ್ ಶೈಲಿಯಲ್ಲಿ ಕೌಬಾಯ್ ಹ್ಯಾಟ್, ಬ್ರೌನ್ ಜಾಕೆಟ್ ಹಾಗೂ ಬೂಟ್ ಧರಿಸಿ ಕೌಬಾಯ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಜೋಡಿಯ ಮುದ್ದಾದ ಮಗಳು ಮಾಲ್ತಿ ಮೇರಿ ಬೆಳ್ಳನೆಯ ಪ್ರಿನ್ಸೆಸ್ ಉಡುಪು ಹಾಗೂ ಬಿಳಿ ಬಣ್ಣದ ವಿಗ್ ಧರಿಸಿ ‘ಗೋಸ್ಟ್ ಪ್ರಿನ್ಸೆಸ್’ (ದೆವ್ವದ ರಾಜಕುಮಾರಿ) ರೂಪದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ.
ದೀಪಾವಳಿ ಹಬ್ಬದ ವಾತಾವರಣದಲ್ಲೇ ಬಂದ ಹ್ಯಾಲೋವೀನ್ ಅನ್ನು ಪ್ರಿಯಾಂಕಾ ಚೋಪ್ರಾ #diwaloween ಎಂದು ಕರೆದು ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರಸ್ತುತ ಪ್ರಿಯಾಂಕಾ ಚೋಪ್ರಾ ಕುಟುಂಬದ ಈ ಫ್ಯಾಮಿಲಿ ಹ್ಯಾಲೋವೀನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

