HomeFeatured Newsಎದೆಹಾಲು ಕೊಡುವುದರಿಂದ ಮಗುವಿಗೆ ಸಿಗುತ್ತೆ ಈ ಆರೋಗ್ಯಕರ ಪ್ರಯೋಜನಗಳು

ಎದೆಹಾಲು ಕೊಡುವುದರಿಂದ ಮಗುವಿಗೆ ಸಿಗುತ್ತೆ ಈ ಆರೋಗ್ಯಕರ ಪ್ರಯೋಜನಗಳು

ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ ವಿಕಾಸ ಪಡೆಯಲು ಸಾಧ್ಯವಾಗುತ್ತದೆ.

ತಾಯಿಯ ಹಾಲಿಗೆ ಪರ್ಯಾಯವಾಗಿ ಮಾರ್ಕೆಟ್ ನಲ್ಲಿ ಅನೇಕ ತರಹದ ಫಾರ್ಮುಲಾ ಫೀಡ್ಸ್ ಇವೆ. ಆದರೆ ಅವು ಯಾವುದು ತಾಯಿ ಹಾಲಿಗೆ ಸಾಟಿಯಲ್ಲ. ಸ್ವಾಭಾವಿಕವಾದ ತಾಯಿ ಹಾಲು ಕೊಡುವಂತಹ ಪೋಷಕಗಳು ಹಾಗೂ ಸಮೃದ್ಧಿಯನ್ನು ಕೊಡಲು ಸಾಧ್ಯವಿಲ್ಲ. ಹಾಗಾದ್ರೆ ಎದೆಹಾಲಿನಿಂದ ಮಗುವಿಗೆ ಏನೆಲ್ಲಾ ಅನುಕೂಲಗಳಾಗುತ್ತವೆ ನೋಡೋಣ.

 ಪ್ರೋಟಿನ್ ಮತ್ತು ಅಮೈನೋ ಆಸಿಡ್ ಗಳು

ಎದೆ ಹಾಲಿನಲ್ಲಿರುವ ಪ್ರೊಟೀನ್ ಮತ್ತು ಅಮೈನೋ ಆಸಿಡ್ ಗಳು ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಟಮಿನ್ ಗಳು

ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಖನಿಜಾಂಶಗಳು

ಕ್ಯಾಲ್ಸಿಯಂ, ಪೊಟಾಸಿಯಂ, ಸೋಡಿಯಂ ಕ್ಲೋರೈಡ್ ಮತ್ತು ಫಾಸ್ಪೇಟ್ ಸಮ ಪ್ರಮಾಣದಲ್ಲಿ ದೊರೆಯುತ್ತದೆ.

ಲ್ಯಾಕ್ಟೋಸ್

ಮಗುವಿಗೆ ಕಬ್ಬಿಣಾಂಶವನ್ನು ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವಂತೆ ಮಾಡುತ್ತದೆ.

ರೋಗ ನಿರೋಧಕ ಅಂಶಗಳು

ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅಂಟುರೋಗಗಳು, ಅಲರ್ಜಿ, ಬೇಧಿ, ಶ್ವಾಸಕೋಶದ ಸಮಸ್ಯೆ, ಸಕ್ಕರೆ ಕಾಯಿಲೆ, ಆಮಶಂಕೆ ಮುಂತಾದ ರೋಗಗಳು ಬರದಂತೆ ತಡೆಗಟ್ಟುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular