HomeLatest NewsBREAKING : 'UPSC' ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟ, ಇಲ್ಲಿದೆ ಟಾಪರ್ಸ್‌' ಗಳ ಪಟ್ಟಿ!

BREAKING : ‘UPSC’ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟ, ಇಲ್ಲಿದೆ ಟಾಪರ್ಸ್‌’ ಗಳ ಪಟ್ಟಿ!

ನವದೆಹಲಿ :  ಭಾರತದ ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯ (UPSC CSE 2025) ಅಂತಿಮ ಫಲಿತಾಂಶ ಇಂದು ಬಿಡುಗಡೆಯಾಗಿದೆ. ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದ ಈ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಮೊದಲ ರ್ಯಾಂಕ್  (AIR 1) ಪಡೆಯುವ ಮೂಲಕ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಒಟ್ಟು 1,087 ಹುದ್ದೆಗಳ ಪೈಕಿ, ಯುಪಿಎಸ್‌ಸಿ ಸದ್ಯಕ್ಕೆ 958 ಅಭ್ಯರ್ಥಿಗಳನ್ನು ವಿವಿಧ ಸೇವೆಗಳಿಗೆ ಶಿಫಾರಸು ಮಾಡಿ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಟಾಪ್ 10 ಅಭ್ಯರ್ಥಿಗಳಲ್ಲಿ ಅನುಜ್ ಅಗ್ನಿಹೋತ್ರಿ ಮೊದಲ ಸ್ಥಾನದಲ್ಲಿದ್ದರೆ, ರಾಜೇಶ್ವರಿ ಸುವೆ ಎರಡನೇ ರ್‍ಯಾಂಕ್ ಮತ್ತು ಆಕಾಂಶ್ ಧುಲ್ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

2025ರ ಆಗಸ್ಟ್‌ನಲ್ಲಿ ನಡೆದ ಮುಖ್ಯ ಪರೀಕ್ಷೆ (Mains) ಮತ್ತು 2026ರ ಫೆಬ್ರವರಿಯಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಆಧಾರದ ಮೇಲೆ ಈ ಅಂತಿಮ ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರು ಐಎಎಸ್ (IAS), ಐಪಿಎಸ್ (IPS), ಐಎಫ್‌ಎಸ್ (IFS) ನಂತಹ ಉನ್ನತ ಪದವಿಗಳನ್ನು ಅಲಂಕರಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಪಿಎಸ್‌ಸಿ ಸಿವಿಲ್ ಸರ್ವಿಸಸ್ (UPSC CSE 2025) ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಟಾಪ್ 20 ಅಭ್ಯರ್ಥಿಗಳ ವಿವರ ಇಲ್ಲಿದೆ:

ದೇಶದ ಮೊದಲ 20 ರ್ಯಾಂಕ್ ವಿಜೇತರ ಪಟ್ಟಿ

  1. ಅನುಜ್ ಅಗ್ನಿಹೋತ್ರಿ (ರೋಲ್ ನಂ. 1131589) –
  2. ರಾಜೇಶ್ವರಿ ಸುವೆ (4000040)
  3. ಆಕಾಂಶ್ ಧುಲ್ (3512521)
  4. ರಾಘವ್ ಝುನ್‌ಝುನ್‌ವಾಲಾ (0834732)
  5. ಈಶಾನ್ ಭಟ್ನಾಗರ್ (0409847)
  6. ಜಿನಿಯಾ ಅರೋರಾ (6410067)
  7. ಎ.ಆರ್. ರಾಜಾ ಮೊಹೈದೀನ್ (0818306)
  8. ಪಕ್ಷಲ್ ಸೆಕ್ರೆಟರಿ (0843487)
  9. ಆಸ್ಥಾ ಜೈನ್ (0831647)
  10. ಉಜ್ವಲ್ ಪ್ರಿಯಾಂಕ್ (1523945)
  11. ಯಶಶ್ವಿ ರಾಜ್ ವರ್ಧನ್ (1512091)
  12. ಅಕ್ಷಿತ್ ಭರದ್ವಾಜ್ (0840280)
  13. ಆನ್ಯ ಶರ್ಮಾ (7813999)
  14. ಸುರಭಿ ಯಾದವ್ (5402316)
  15. ಸಿಮ್ರನ್‌ದೀಪ್ ಕೌರ್ (3507500)
  16. ಮೋನಿಕಾ ಶ್ರೀವಾಸ್ತವ (0867445)
  17. ಚಿತ್ವಾನ್ ಜೈನ್ (0829589)
  18. ಶೃತಿ ಆರ್ (5604518)
  19. ನಿಶಾರ್ ದಿಶಾಂತ್ ಅಮೃತ್‌ಲಾಲ್ (0105602)
  20. ರವಿ ರಾಜ್ (6630448)

ಈ ಪಟ್ಟಿಯಲ್ಲಿ ಅನುಜ್ ಅಗ್ನಿಹೋತ್ರಿ ದೇಶಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದರೆ, ರಾಜೇಶ್ವರಿ ಸುವೆ ಅವರು ಮಹಿಳಾ ಅಭ್ಯರ್ಥಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಒಟ್ಟು 958 ಅಭ್ಯರ್ಥಿಗಳನ್ನು ವಿವಿಧ ಕೇಂದ್ರ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ.ಈ ವರ್ಷ ಒಟ್ಟು 1,087 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

  • IPS (ಭಾರತೀಯ ಪೊಲೀಸ್ ಸೇವೆ): 150 ಹುದ್ದೆಗಳು.
  • IFS (ಭಾರತೀಯ ವಿದೇಶಾಂಗ ಸೇವೆ): 55 ಹುದ್ದೆಗಳು.
  • ಇತರ ಕೇಂದ್ರ ಸೇವೆಗಳು: ಗ್ರೂಪ್ ‘ಎ’ ನಲ್ಲಿ 507 ಮತ್ತು ಗ್ರೂಪ್ ‘ಬಿ’ ನಲ್ಲಿ 195 ಹುದ್ದೆಗಳು.

ಅಭ್ಯರ್ಥಿಗಳಿಗೆ ಸೂಚನೆ:

  • ಫಲಿತಾಂಶಗಳು ಈಗ upsc.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.
  • ಅಭ್ಯರ್ಥಿಗಳ ವೈಯಕ್ತಿಕ ಅಂಕಗಳ ವಿವರಗಳನ್ನು ಇನ್ನು 15 ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.
  • ಸಂದೇಹಗಳ ನಿವಾರಣೆಗಾಗಿ ಯುಪಿಎಸ್‌ಸಿ ಸಹಾಯವಾಣಿ ಸಂಖ್ಯೆ 011-23385271 ಅನ್ನು ಕೆಲಸದ ದಿನಗಳಲ್ಲಿ ಸಂಪರ್ಕಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular