ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಧಿಕಾರಿಗಳು ದಾಖಲೆಯಿಲ್ಲದ 6.17 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಮೂರು ಪ್ರತ್ಯೇಕ ಚೆಕ್ ಪೋಸ್ಟ್ ಗಳಲ್ಲಿ 6.17 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ನಗರದ ಭೂಮಿಕಾ ನಗರದ ಚೆಕ್ ಪೋಸ್ಟ್ ನಲ್ಲಿ 4 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಜಯನಗರದ ಪವನಕುಮಾರ್ ಬಳಿ ಇದ್ದ 4 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ.
ಕಾರಿಗನೂರು ಕ್ರಾಸ್ ಚೆಕ್ ಪೋಸ್ಟ್ ನಲ್ಲಿ 1.15 ಲಕ್ಷ ರೂ. ಜಪ್ತಿ ಮಾಡಲಾಗಿದೆ ಪ್ರಕಾಶ್ ಮರುಳಸಿದ್ದ ಎಂಬುವರ ಹಣ ವಶಕ್ಕೆ ಪಡೆಯಲಾಗಿದೆ. ಮಾಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ 1.12 ಲಕ್ಷ ರೂಶಕ್ಕೆ ಪಡೆಯಲಾಗಿದೆ. ಚಿತ್ತನಹಳ್ಳಿಗೆ ಸೇರಿದ ವ್ಯಕ್ತಿಯಿಂದ 1.12 ಲಕ್ಷದ ವಶಕ್ಕೆ ಪಡೆಯಲಾಗಿದೆ.

