HomeKarnatakaBREAKING: ವಾಕಿಂಗ್ ಹೋಗಿದ್ದ ವೃದ್ಧೆ ಸರ ದೋಚಿದ್ದ ಇಬ್ಬರು ಅರೆಸ್ಟ್

BREAKING: ವಾಕಿಂಗ್ ಹೋಗಿದ್ದ ವೃದ್ಧೆ ಸರ ದೋಚಿದ್ದ ಇಬ್ಬರು ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗದಲ್ಲಿ ವೃದ್ಧೆಯ ಸರ ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನದ ಸರ, ಬೈಕ್ ವಶಕ್ಕೆ ಪಡೆಯಲಾಗಿದೆ.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯ ವಾಸಿ 73  ವರ್ಷದ ವೃದ್ದೆಯೊಬ್ಬರು ದಿನಾಂಕ 13/05/2026 ರಂದು ವಾಕಿಂಗ್ ಗೆ ಹೋಗಿದ್ದಾಗ, ಯಾರೋ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಸರಗಳ್ಳತನ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ ಎಸ್ಪಿ ನಿಖಿಲ್ ಬಿ., ಎಎಸ್ಪಿ ಕಾರಿಯಪ್ಪ, ಡಿವೈಎಸ್ಪಿ ಸಂಜೀವ್ ಕುಮಾರ್ ಟಿ. ಮಾರ್ಗದರ್ಶನದಲ್ಲಿ ಪೊಲೀಸ್ ನೀರಿಕ್ಷಕ ವಿನೋಬನಗರ ಪೊಲೀಸ್ ಠಾಣೆ ತೋಷ ಕುಮಾರ್ ಡಿ.ಕೆ. ರವರ ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿಗಳಾದ ರಾಜು ಕೆ.ಆರ್., ಚಂದ್ರಾನಾಯ್ಕ ಬಿ., ಮಲ್ಲಪ್ಪ ಎಸ್ ಜಿ,, ಅರುಣಕುಮಾರ್ ಎನ್ ಕೆ,, ಮನುಶಂಕರ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನಿಖಾ ತಂಡವು ಪ್ರಕರಣದ ಆರೋಪಿತರಾದ ಭರತ್(21) ಚಾಲುಕ್ಯನಗರ ಗೋಪಾಳ ಶಿವಮೊಗ್ಗ ಟೌನ್ ಮತ್ತು ಮೊಹ್ಮದ್ ಆಬೀದ್(19) ಮೇಲಿನ ತುಂಗಾನಗರ ಗೋಪಾಳ ಶಿವಮೊಗ್ಗ ಅವರುಗಳನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ ಬಂಗಾರ ಅಂದಾಜು ಬೆಲೆ 1,00,000 ರೂ. ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅಂದಾಜು ಬೆಲೆ 40,000 ರೂ ಸೇರಿ ಒಟ್ಟು ಅಂದಾಜು ಮೌಲ್ಯ 1,40,000 ರೂ. ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular