ರಿಜ್ವಾನ್ ಅರ್ಷದ್ ಗೆ ಶಿವಾಜಿನಗರದ ಟಿಕೆಟ್ ಕೊಡಿಸಿದ್ದು ನಮ್ಮ ತಂದೆ ಸಚಿವ ಜಮೀರ್ ಅಹ್ಮದ್ ಖಾನ್ ಎಂದು ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ಕೊಡಿಸಿದ್ದರು. 2023ರಲ್ಲೇ ನನಗೆ ಸಿದ್ದರಾಮಯ್ಯ ಅವರು ಬಿ ಫಾರಂ ನೀಡಿದ್ದರು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಝೈದ್ ಖಾನ್ ಹೇಳಿದ್ದಾರೆ.
ರಿಜ್ವಾನ್ ಅರ್ಷದ್ ಗೆ ಶಿವಾಜಿನಗರದ ಕ್ಷೇತ್ರದ ಟಿಕೆಟ್ ಕೊಡಿಸಿದ್ದು ನಮ್ಮ ತಂದೆ. ಚುನಾವಣೆಯಲ್ಲಿ ರಿಜ್ವಾನ್ ಗೆಲ್ಲಿಸಿದ್ದು ಸಹ ನಮ್ಮ ತಂದೆ. ಶಿವಾಜಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿದ್ದಾರೆ. ನಮ್ಮ ಮನೆ ಸಹ ಶಿವಾಜಿನಗರ ಕ್ಷೇತ್ರದಲ್ಲಿ ಇದೆ. ನಾನು ಬಯಸಿದ್ದರೆ ಆಗಲೇ ಶಾಸಕನಾಗುತ್ತಿದ್ದೆ ಜಮೀರ್ ಪುತ್ರ ಹಾಗೂ ನಟ ಝೈದ್ ಖಾನ್ ಅವರ ಹೇಳಿಕೆ ವಿಡಿಯೋ ವೈರಲ್ ಆಗಿದೆ.

