HomeLatest Newsಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ: ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಲು ಇಲ್ಲಿವೆ ವಿಭಿನ್ನ ಶೈಲಿಯ ಶುಭಾಶಯಗಳು...

ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ: ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಲು ಇಲ್ಲಿವೆ ವಿಭಿನ್ನ ಶೈಲಿಯ ಶುಭಾಶಯಗಳು ಇಲ್ಲಿವೆ

ಬೆಂಗಳೂರು: ನಾಡಿನಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪುಣ್ಯಕಾಲ ಕೇವಲ ಋತುಮಾನದ ಬದಲಾವಣೆಯಲ್ಲ ಇದು ಸ್ನೇಹ ಸೌಹಾರ್ದತೆ ಮತ್ತು ಸಮೃದ್ಧಿಯ ಮಹಾಪರ್ವ. ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯು ರೈತಾಪಿ ವರ್ಗದ ಪಾಲಿಗೆ ‘ಸುಗ್ಗಿ ಹಬ್ಬ’ವಾಗಿಯೂ ಅನ್ವರ್ಥವಾಗಿದೆ.

“ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು” ಇದು ಸಂಕ್ರಾಂತಿಯ ಮೂಲ ಮಂತ್ರ. ಚಳಿಗಾಲದ ಶೀತ ಮತ್ತು ವಾತದಿಂದ ಉಂಟಾಗುವ ಆಲಸ್ಯವನ್ನು ದೂರ ಓಡಿಸಲು ಎಳ್ಳು ಮತ್ತು ಬೆಲ್ಲದಂತಹ ಸ್ನೇಹ ದ್ರವ್ಯಗಳ ಸೇವನೆ ಅತ್ಯಗತ್ಯ ಎಂಬುದು ನಮ್ಮ ಪೂರ್ವಜರ ವೈಜ್ಞಾನಿಕ ದೂರದೃಷ್ಟಿ. ಬಂಧು-ಮಿತ್ರರಿಗೆ ಎಳ್ಳು-ಬೆಲ್ಲ ಹಂಚುವ ಮೂಲಕ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಅದ್ಭುತ ಸಂಪ್ರದಾಯ ನಮ್ಮ ಕರ್ನಾಟಕದಲ್ಲಿದೆ.

ಸಂಕ್ರಾಂತಿ 2026: ನಿಮ್ಮ ಪ್ರೀತಿಪಾತ್ರರಿಗಾಗಿ ಇಲ್ಲಿವೆ ಸುಂದರ ಶುಭಾಶಯ ಸಂದೇಶಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಎಳ್ಳು ಬೆಲ್ಲದ ಸವಿಯಂತೆ ನಿಮ್ಮ ಮಾತು ಸವಿ ಇರಲಿ, ಸಂಕ್ರಾಂತಿ ಸುಗ್ಗಿಯಂತೆ ನಿಮ್ಮ ಬದುಕು ಸಮೃದ್ಧವಾಗಿರಲಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು

*ಸುಗ್ಗಿಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು

*ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.

*ಪೈರು ಕಟಾವಿನ ಸಡಗರ, ರೈತನ ಮೊಗದಲ್ಲಿ ನಗು ತರುವ ಸುಗ್ಗಿ ಹಬ್ಬ. ಈ ಸಂಕ್ರಾಂತಿ ನಾಡಿಗೆ ಒಳಿತನ್ನು ಮಾಡಲಿ. ಹಬ್ಬದ ಶುಭಾಶಯಗಳು

*ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ

*ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ

*ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಬಣ್ಣಗಳನ್ನು ತರಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

*ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…

*ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ.ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು

*ಸಂಕ್ರಾಂತಿ ಹಬ್ಬದ ಸಿಹಿ ಸವಿ ನಿಮ್ಮ ಬಾಳಿನಾದ್ಯಂತ ಇರಲಿ

*ಬಣ್ಣದ ರಂಗೋಲಿ, ಹಾರುವ ಪಟಗಾಳಿ, ಮನೆ ತುಂಬಲಿ ಎಳ್ಳು-ಬೆಲ್ಲದ ಸಂಭ್ರಮ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular