ಮಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಚಂದ್ರ ದರ್ಶನ ಹಿನ್ನೆಲೆಯಲ್ಲಿ ಇಂದಿಗೆ ರಂಜಾನ್ ಉಪವಾಸ ವ್ರತ ಕೊನೆಯಾಗಿದೆ. ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯ ಮೂಲಕ ರಂಜಾನ್ ಹಬ್ಬ ಆಚರಿಸಲಾಗುವುದು.
ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ ರಂಜಾನ್ ಹಬ್ಬ ಆಚರಿಸಲಾಗುವುದು. ಇಂದು ಶವ್ವಾಲ್ ಮಾಸದ ಚಂದ್ರ ದರ್ಶನ ಹಿನ್ನೆಲೆಯಲ್ಲಿ ನಾಳೆ ರಂಜಾನ್ ಹಬ್ಬ ಆಚರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಅಲ್ ಹಾಜ್ ತ್ವಾಕಾ ಅಹಮದ್ ಮುಸ್ಲಿಯಾರ್, ಶುಕ್ರವಾರ ರಂಜಾನ್ ಹಬ್ಬ ಆಚರಣೆ ಘೋಷಣೆ ಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಮುಸ್ಲಿಮರು ಉಪವಾಸ ಆಚರಿಸಿದ್ದರು. ಚಂದ್ರ ದರ್ಶನ ಹಿನ್ನೆಲೆಯಲ್ಲಿ ಇಂದಿಗೆ ಉಪವಾಸ ವ್ರತ ಕೊನೆಯಾಗಿದ್ದು, ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯ ಮೂಲಕ ಹಬ್ಬ ಆಚರಿಸಲಾಗುವುದು ಎನ್ನಲಾಗಿದೆ.

