HomeKarnatakaBREAKING : ಶವಾಗಾರದ ಮುಂದೆಯೇ ಕುಸಿದು ಬಿದ್ದ PSI ಪರಶುರಾಮ್ ಪತ್ನಿ ಶ್ವೇತಾ, ಆಸ್ಪತ್ರೆಗೆ ದಾಖಲು..!

BREAKING : ಶವಾಗಾರದ ಮುಂದೆಯೇ ಕುಸಿದು ಬಿದ್ದ PSI ಪರಶುರಾಮ್ ಪತ್ನಿ ಶ್ವೇತಾ, ಆಸ್ಪತ್ರೆಗೆ ದಾಖಲು..!

ಯಾದಗಿರಿ : ಪಿಎಸ್ ಐ ಪರಶುರಾಮ್ ಸಾವಿನ ಶಾಕ್ ಗೆ ಒಳಗಾದ ಅವರ ಪತ್ನಿ ಇಂದು ಶವಾಗಾರದ ಮುಂದೆಯೇ ಕುಸಿದು ಬಿದ್ದಿದ್ದಾರೆ.

ಪಿಎಸ್ ಐ ಪರಶುರಾಮ್ ಪತ್ನಿ ಶ್ವೇತಾ ಅವರು ಶವಾಗಾರದ ಮುಂದೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದು, ಕೂಡಲೇ ಅವರನ್ನು ಸಂಬಂಧಿಕರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಶುರುವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಹಾಗೂ ಶಾಸಕನ ಪುತ್ರನ ವಿರುದ್ಧ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಯಾದಗಿರಿ ಎಸ್ ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪಿಎಸ್ಐ ಹುದ್ದೆ ಪಡೆಯಲು ಪರಶುರಾಮ್ 30 ಲಕ್ಷ ರೂಪಾಯಿ ನೀಡಿದ್ದಾರೆ. ಹುದ್ದೆಗಾಗಿ ಬಹಳ ಸಾಲ ಮಾಡಿದ್ದರು. ಈಗ ಒಂದು ವರ್ಷ ಪೂರೈಸುವ ಮೊದಲೇ ಯಾದಗಿರಿಯ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular