HomeLatest NewsBREAKING: ಭಟ್ಕಳದಲ್ಲಿ ಪೊಲೀಸರ ದಾಳಿ: ನಿಷೇಧಿತ ಇ-ಸಿಗರೇಟ್, ನಿಕೋಟಿನ್ ಲಿಕ್ವಿಡ್ ವಶಕ್ಕೆ

BREAKING: ಭಟ್ಕಳದಲ್ಲಿ ಪೊಲೀಸರ ದಾಳಿ: ನಿಷೇಧಿತ ಇ-ಸಿಗರೇಟ್, ನಿಕೋಟಿನ್ ಲಿಕ್ವಿಡ್ ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ರಿಮ್ಸ್ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಿಷೇಧಿತ ಇ –ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮುಗ್ದುಂ ಕಾಲೋನಿ ನಿವಾಸಿಯಾಗಿರುವ ಅಂಗಡಿಗೆ ಮಾಲೀಕ ಮಕ್ಬುಲ್ ಬಂಧಿತ ಆರೋಪಿ. ದಾಳಿಯ ವೇಳೆ 2.39 ಲಕ್ಷ ರೂಪಾಯಿ ಮೌಲ್ಯದ ಇ- ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರೀಫಿಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೂವಿನ ಚೌಕ ಬಳಿ ಟೌನ್ ಸೆಂಟರ್ ನಲ್ಲಿರುವ ರಿಮ್ಸ್ ಅಂಗಡಿಯಲ್ಲಿ 51 ಇ- ಸಿಗರೇಟ್, 154 ನಿಕೋಟಿನ್ ಲಿಕ್ವಿಡ್ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular