HomeKarnatakaBREAKING : ಬೆಂಗಳೂರಿನ ಜನತೆಗೆ ಮತ್ತೆ ಚಿರತೆ ಆತಂಕ : ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ...

BREAKING : ಬೆಂಗಳೂರಿನ ಜನತೆಗೆ ಮತ್ತೆ ಚಿರತೆ ಆತಂಕ : ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಪ್ರತ್ಯೇಕ್ಷ

 

ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಮ್ಮೆ ಚಿರತೆ ಆತಂಕ ಎದುರಾಗಿದ್ದು,  ವೈಟ್ ಫೀಲ್ಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ವೈಟ್ ಫೀಲ್ಡ್, ಕೂಡ್ಲುವಿನ ಎಇಸಿಎಸ್ ಲೇಔಟ್ ಬಳಿ ರಾತ್ರಿ ಹೊತ್ತು ಕಾರಿಗೆ ಅಡ್ಡಲಾಗಿ ಚಿರತೆ ಓಡಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಚಿರತೆ ಓಡಾಟದಿಂದ ಸ್ಥಳೀಯ ಜನರಲ್ಲಿ ಆತಂಕ ಎದುರಾಗಿದೆ.

ವೈಟ್ ಫೀಲ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿರುವುದು ಇದು ಎರಡನೇ ಬಾರಿಯಾಗಿದೆ. ಚಿರತೆ ಪ್ರತ್ಯಕ್ಷವಾಗಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular